ಕನ್ನಡ ಕಾರ್ಯಕ್ಕೆ ಭಾಲ್ಕಿ ಶ್ರೀ ಕೊಡುಗೆ ಅಪಾರ

ಬೀದರ್‌ನಲ್ಲಿ ಆಯೋಜಿಸಿದ್ದ ವಚನ ಮಂಟಪ, ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರ ಸತ್ಕಾರ ಸಮಾರಂಭದಲ್ಲಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸುರೇಶ ಚನ್ನಶೆಟ್ಟಿ, ಡಾ.ಅಬ್ದುಲ್ ಖದೀರ್, ಬಸವರಾಜ ಧನ್ನೂರ ಇತರರಿದ್ದರು.
ಬೀದರ್‌ನಲ್ಲಿ ಆಯೋಜಿಸಿದ್ದ ವಚನ ಮಂಟಪ, ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರ ಸತ್ಕಾರ ಸಮಾರಂಭದಲ್ಲಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸುರೇಶ ಚನ್ನಶೆಟ್ಟಿ, ಡಾ.ಅಬ್ದುಲ್ ಖದೀರ್, ಬಸವರಾಜ ಧನ್ನೂರ ಇತರರಿದ್ದರು.
Published on
ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡದ ಉಳಿವಿಗೆ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ. ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡ ಕಾರ್ಯಗಳಿಗೆ ಸದಾ ಕಂಕಣಬದ್ಧವಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ನಗರದ ಗಾಂಧಿಗಂಜ್‌ನ ಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಎಂಟನೇ ವಚನ ಮಂಟಪ, ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಧಕರ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಮಾತೃ ಭಾಷೆ ಕನ್ನಡ ನಮ್ಮ ಉಸಿರಾಗಬೇಕು. ಇದುವೇ ಹಿರಿಯ ಪೂಜ್ಯರ ಉಸಿರಾಗಿತ್ತು ಎಂದರು.
ನೇತೃತ್ವ ವಹಿಸಿದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಮಹಾಸಭಾ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜವಾಬ್ದಾರಿ ಹೆಚ್ಚಾಗಿದ್ದು, ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ಪ್ರಸ್ತುತ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಮೊಬೈಲ್‌ನಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಪಾಲಕರು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಉದ್ಘಾಟಿಸಿದರು. ಸಾಹಿತಿ ಡಾ.ರೇಣುಕಾ ಎಂ.ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.
ಸ್ವರ್ಣ ಕನ್‌ಸ್ಟ್ರಕ್ಷನ್ಸ್ ಮುಖ್ಯಸ್ಥ ವೀರಶೆಟ್ಟಿ ಮಣಗೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಶಿವಶಂಕರ ಟೋಕರೆ, ರಾಷ್ಟ್ರೀಯ ಬಸವ ದಳದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ವೀರಶೆಟ್ಟಿ ಪಾಟೀಲ್ ಮರಕಲ್, ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ಜೈರಾಜ ಖಂಡ್ರೆ, ಉಷಾ ಮಿರ್ಚೆ, ವೀರಭದ್ರಪ್ಪ ಬುಯ್ಯಾ, ವಿಜಯಕುಮಾರ ಸೋನಾರೆ ಇತರರಿದ್ದರು.
ಕಲಾವಿದ ಶಿವಕುಮಾರ ಪಾಂಚಾಳ ನಾಡಗೀತೆ ಹಾಡಿದರು. ಬಾಬುರಾವ ದಾನಿ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಣೆ ಮಾಡಿದರು. ಜಯದೇವಿ ಯದಲಾಪುರೆ ವಂದಿಸಿದರು. ಸಿದ್ಧೇಶ್ವರ ಪಿಕೆಪಿಎಸ್ ಅಧ್ಯಕ್ಷೆ ಶಾಂತಾ ಜೈರಾಜ ಖಂಡ್ರೆ ಭಕ್ತಿ ದಾಸೋಹಗೈದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಡಿವಾಳಯ್ಯ ಸಾಲಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಪತ್ರಕರ್ತ ಸದಾನಂದ ಜೋಶಿ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧನರಾಜ ದಶರಥ, ಶ್ರೀಕಾಂತ ಭವಾನಿ, ಬಸವಚೇತನ ವೈಜಿನಾಥ, ಸಿದ್ರಾಮ ಶಂಕರೆಪ್ಪ, ಸೈಯದ್ ಮುಜೀಬ್ ಅಹಮ್ಮದ್, ಶಿವಕುಮಾರ ತುಂಗಾ, ಲೋಕೇಶ ಪ್ರಭುಶೆಟ್ಟಿ, ಸ್ವರೂಪರಾಣಿ ಪಾಟೀಲ್, ಡಾ.ಸುನೀತಾ ಕೂಡ್ಲಿಕರ್, ಡಾ.ಶ್ರೇಯಾ ಮಹೇಂದ್ರಕರ್, ಮಲ್ಲಮ್ಮ ಮಾಧವರಾವ, ರಾಮಯ್ಯ ರಾಮಚಂದ್ರ, ಬಸಪ್ಪ ಭದಾಡೆ, ಅರ್ಜುನರಾವ ಕಾಂಚೆ, ಅನೀಲಕುಮಾರ ದೇಶಮುಖ, ಶ್ರಾವಣಕುಮಾರ ಮೇತ್ರೆ ಅವರನ್ನು ಸನ್ಮಾನಿಸಲಾಯಿತು.
"

ಕನ್ನಡ ಶಾಲೆ ಉಳಿವಿಗೆ ಮೊದಲು ಇಚ್ಛಾಶಕ್ತಿ ಅವಶ್ಯಕ. ಕನ್ನಡ ಶಾಲೆ ಉಳಿಸಿ, ಬೆಳೆಸುವ ಆಸಕ್ತಿ ರಾಜಕಾರಣಿಗಳಲ್ಲಿ ಬೇಕು. ಎರಡು ರಾಜ್ಯಗಳ ಗಡಿಗೆ ಹೊಂದಿಕೊAಡಿರುವ ಬೀದರ್ ಜಿಲ್ಲೆಯಲ್ಲಿ ಕನ್ನಡವನ್ನು ಸಮೃದ್ಧವಾಗಿ ಕಟ್ಟುವ ಹೊಣೆಗಾರಿಕೆ ಎಲ್ಲರ ಮೇಲಿದೆ.

| ಸುರೇಶ ಚನ್ನಶೆಟ್ಟಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ


"

ಸದ್ಯ ಹೆಚ್ಚಿನವರು ಕನ್ನಡ ಮಾತನಾಡುವಾಗ ಹೆಚ್ಚು ಇಂಗ್ಲಿಷ್ ಪದ ಬಳಸುತ್ತಿದ್ದಾರೆ. ಅಚ್ಚ ಕನ್ನಡದಲ್ಲಿ ಮಾತನಾಡಿದಾಗ ಮಾತ್ರ ಕನ್ನಡ ಉಳಿಯುತ್ತದೆ. ಕನ್ನಡ ಉಳಿದರೆ ವಚನ ಸಾಹಿತ್ಯ ಉಳಿಯುತ್ತದೆ.

| ಬಸವರಾಜ ಧನ್ನೂರ

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net