ಜಾತ್ರೆಗಳು ಸನಾತನ ಸಾಂಸ್ಕೃತಿಕ ಪ್ರತೀಕ

ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಶರಭಾವತಾರ ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ರಥೋತ್ಸವ ನಡೆಯಿತು
ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಶರಭಾವತಾರ ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ರಥೋತ್ಸವ ನಡೆಯಿತು
Published on

ಬೀದರ್: ಜಾತ್ರೆಗಳು ಸನಾತನ ಧರ್ಮ, ಸಾಂಸ್ಕೃತಿಕ ಪ್ರತೀಕವಾಗಿವೆ ಎಂದು ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯ ನುಡಿದರು.
ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಶರಭಾವತಾರ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಸೋಮವಾರ ನಡೆದ ಮಹಾ ರಥೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಆದಿ, ಅನಾದಿ ಕಾಲದಿಂದಲೂ ಜಾತ್ರೆಗಳು ವಿಶ್ವವಿಖ್ಯಾತ ಭಾರತದ ಸನಾತನ ಧರ್ಮವನ್ನು ಪೋಷಿಸಿಕೊಂಡು ಬಂದಿವೆ ಎಂದು ಹೇಳಿದರು.
ಭಾರತದ ಸನಾತನ ಧರ್ಮ, ಸಂಸ್ಕøತಿ ವಿಶ್ವದಲ್ಲಿಯೇ ಅತ್ಯಂತ ಪ್ರಾಚೀನವಾದದ್ದು. ಪ್ರಪಂಚದ ಇತರ ಭಾಗಗಳಲ್ಲಿ ಜ್ಞಾನದ ಬೆಳಕು ಇಲ್ಲದ ಸಂದರ್ಭದಲ್ಲಿ ಭಾರತ ಶಿಕ್ಷಣ,  ಸಾಹಿತ್ಯ, ಆಧ್ಯಾತ್ಮ, ವಿಜ್ಞಾನ ಮುಂತಾದ ಹತ್ತು ಹಲವು ಸಂಸ್ಕøತಿಗಳ ನೆಲೆಬೀಡಾಗಿ ಪ್ರಸಿದ್ಧಿ ಪಡೆದಿತ್ತು ಎಂದು ತಿಳಿಸಿದರು.
ಮಾನವನ ಇಹಿಕ ಜೀವನದ ಜತೆಗೆ ಪಾರಮಾರ್ಥದಿಂದ ಮೋಕ್ಷದ ಮಹಾ ಮಾರ್ಗದ ಸದ್ಭೋದನೆ ಇಲ್ಲಿ ನಡೆಯುತ್ತಿತ್ತು ಎಂದು ಹೇಳಿದರು.
ಮಾತೃ ಶಕ್ತಿಯ ಗೌರವ ಹೆಚ್ಚಿಸುವುದಕ್ಕಾಗಿ ವೀರಭದ್ರೇಶ್ವರ ಅವತಾರ ಆಗಿದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶರಭಾವತಾರ ವೀರಭದ್ರೇಶ್ವರ ಚರಿತ್ರೆ, ಇತಿಹಾಸ ಅತ್ಯಂತ ಪ್ರೇರಣಾದಾಯಕವಾಗಿದೆ. ವೀರಭದ್ರೇಶ್ವರ ಕಮಠಾಣ ಗ್ರಾಮದೇವರಾಗಿ ನೆಲೆ ನಿಂತು, ಎಲ್ಲರ ಕಲ್ಯಾಣ ಮಾಡುತ್ತಿದ್ದಾನೆ ಎಂದು ಹೇಳಿದರು.
ಜಾತ್ರೆಯ ಮಹಾ ರಥೋತ್ಸವ 17 ವರ್ಷ ಪೂರೈಸಿರುವುದು ಸಂತೋಷ ಹಾಗೂ ಅಭಿಮಾನ ತಂದಿದೆ. ಜಾತ್ರಾ ಸಮಿತಿ ಹಾಗೂ ಭಕ್ತರ ಸಹಕಾರದಿಂದ ಜಾತ್ರೆ ದಿನದಿಂದ ದಿನಕ್ಕೆ ಬೆಳೆಯುತ್ತಾ ನಡೆದಿದೆ. ಜಿಲ್ಲೆಯ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿ ಮನ್ನಣೆ ಪಡೆಯುತ್ತಿದೆ. ದೇವಸ್ಥಾನವೂ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.
ಪುಷ್ಪಾಲಂಕೃತ ರಥಕ್ಕೆ ಭಕ್ತರು ಬೆಂಡು, ಬತಾಸು, ಬಾಳೆ ಹಣ್ಣು ಎಸೆದರು. ಅನೇಕರು ಹರಕೆ ತೀರಿಸಿದರು. ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಅಪಾರ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.
ಶಿವರಾಜ ಪಾಟೀಲ ಅಯಾಸಪುರ, ಮಹೇಶ ಪಾಟೀಲ ಹಾಗೂ ಸಂತೋಷ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಗವಿ ಮಠದ ರಾಚೋಟೇಶ್ವರ ಶಿವಾಚಾರ್ಯ ಸಮ್ಮುಖ ವಹಿಸಿದ್ದರು. ದಾಸೋಹಿ ಶಿವರಾಜ ಪಾಟೀಲ ಅಯಾಸಪುರ ಸಮಾರಂಭವನ್ನು ಉದ್ಘಾಟಿಸಿದರು.
ಜಾತ್ರೆ ಸಮಿತಿಯ ಅಧ್ಯಕ್ಷ ಕುಶಾಲರಾವ್ ಯಾಬಾ ಸ್ವಾಗತಿಸಿದರು. ಸಂಚಾಲಕ ಶಿವಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯ ಕುಶಾಲ್ ಪಾಟೀಲ ಗಾದಗಿ, ದೇವಸ್ಥಾನದ ಅಧ್ಯಕ್ಷ ರಾಜಕುಮಾರ ಯಾಬಾ, ಶಂಕರಯ್ಯ ಸ್ವಾಮಿ ಗಚ್ಚಿನಮಠ, ಮಲ್ಲಿಕಾರ್ಜುನ ಸ್ವಾಮಿ ಗಚ್ಚಿನಮಠ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ, ಎಪಿಎಂಸಿ ಸದಸ್ಯ ಶಾಂತಯ್ಯ ಸ್ವಾಮಿ, ಮುಖಂಡರಾದ ಪ್ರಭಣ್ಣ ಯಾಬಾ, ಮಾಣಿಕ ಯಾಬಾ, ಸತೀಶ್ ಯಾಬಾ, ಮಲ್ಲಿಕಾರ್ಜುನ ಔರಾದೆ, ಕಲ್ಯಾಣರಾವ್ ಯಾಬಾ, ಓಂಕಾರ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net