ವ್ಯಸನಮುಕ್ತ ಗ್ರಾಮಕ್ಕೆ ಪಣ ತೊಡಿ

ಹುಲಸೂರು ಸಮೀಪದ ಬೆಟಬಾಲಕುಂದಾ ಗ್ರಾಮದಲ್ಲಿ ಶುಕ್ರವಾರ ನಡೆದ ಮಹಾದೇವ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಮಾತೋಶ್ರೀ ಯೋಗೀಶ್ವರಿ, ಸಂಗೀತಾ ಮಾತಾಜಿ, ಇಂಗಳಕೇರೆ ಅಕ್ಕಮಹಾದೇವಿ, ಶಾಸಕ ಶರಣು ಸಲಗರ ಇತರರಿದ್ದರು.
ಹುಲಸೂರು ಸಮೀಪದ ಬೆಟಬಾಲಕುಂದಾ ಗ್ರಾಮದಲ್ಲಿ ಶುಕ್ರವಾರ ನಡೆದ ಮಹಾದೇವ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಮಾತೋಶ್ರೀ ಯೋಗೀಶ್ವರಿ, ಸಂಗೀತಾ ಮಾತಾಜಿ, ಇಂಗಳಕೇರೆ ಅಕ್ಕಮಹಾದೇವಿ, ಶಾಸಕ ಶರಣು ಸಲಗರ ಇತರರಿದ್ದರು.
Published on
ಹುಲಸೂರು: ಶ್ರೀ ಮಹಾದೇವ ದೇವಸ್ಥಾನದ ಕಳಸಾರೋಣ ಹಾಗೂ ೧೨ ಜ್ಯೋತಿರ್ಲಿಂಗ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸಾರ್ಥಕವಾಗಬೇಕಾದರೆ ನೀವೆಲ್ಲರೂ ವ್ಯಸನಮುಕ್ತ ಗ್ರಾಮ ಮಾಡಲು ಪಣ ತೊಡಬೇಕು ಎಂದು ಮೇಹಕರ್-ತಡೋಳಾ ಶ್ರೀ ರಾಜೇಶ್ವರ ಶಿವಾಚಾರ್ಯ ಹೇಳಿದರು.
ಬೆಟಬಾಲಕುಂದಾ ಗ್ರಾಮದಲ್ಲಿ ಶುಕ್ರವಾರ ದೇವಸ್ಥಾನ ಪಂಚ ಕಮಿಟಿ ಆಯೋಜಿಸಿದ್ದ ಮಹಾದೇವ ದೇವಸ್ಥಾನದ ಕಳಸಾರೋಹಣ ಮತ್ತು ದ್ವಾದಶ ೧೨ ಜ್ಯೋತಿರ್ಲಿಂಗ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರೂ ಹಣೆಗೆ ಭಸ್ಮ ಹಚ್ಚಿಕೊಳುವುದರ ಜತೆಗೆ ಲಿಂಗ ಧಾರಣೆ ಮಾಡಬೇಕು. ಇಷ್ಟಲಿಂಗ ಪೂಜೆಯಲ್ಲಿ ಅದ್ಭುತವಾದ ಶಕ್ತಿ ಇದ್ದು, ಪ್ರತಿದಿನ ಬೆಳಗ್ಗೆ ಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.
ಅನ್ಯಧರ್ಮೀಯರು ತಲೆಗೆ ಟೋಪಿ ಜತೆಗೆ ಅವರ ಡ್ರೆಸ್ ಕೋಡ್, ಭೂಮಿಗೆ ತಲೆ ಬಾಗಿ ಪ್ರಾರ್ಥನೆ ಮೂಲಕ ತಮ್ಮ ಧರ್ಮದ ಮೇಲೆ ನಂಬಿಕೆ ಇಟ್ಟು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ. ಆದರೆ ನಮ್ಮ ಧರ್ಮದವರು ಎಲ್ಲವನ್ನು ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ಅಧ್ಯಕ್ಷ ಅರಾಭ್ಯಾಸ ಮೂಲಕ ಸಂಸ್ಕಾರವಂತರನ್ನಾಗಿ ಮಾಡಬೇಕು. ಉಜ್ವಲ ಭವಿಷ್ಯಕ್ಕೆ ಉತ್ತಮ ಸಂಸ್ಕಾರ ನೀಡಲೇಬೇಕು. ತಾಯಂದಿರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಬಿಟ್ಟು ಮನೆ ಕೆಲಸ ಮಾಡಲು ಹೇಳಿಕೊಡಬೇಕು ಎಂದರು.
ತ್ರಿಪುರಾಂತ ಗವಿ ಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿ, ಗ್ರಾಮದಲ್ಲಿ ೧೨ ಜ್ಯೋತಿರ್ಲಿಂಗ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸಂತಸದ ವಿಷಯ. ಸುಖ, ಶಾಂತಿ, ನೆಮ್ಮದಿ ಸಿಗಬೇಕಾದರೆ ಪ್ರತಿದಿನ ಬೆಳಗ್ಗೆ ದೇವಾಲಯ ಪರಿಸರದಲ್ಲಿ ಧ್ಯಾನ ಮಾಡಬೇಕು ಎಂದು ಹೇಳಿದರು.
ಮಹಾದೇವನಿಗೆ ಪ್ರತಿದಿನ ಬೆಳಗ್ಗೆ ನಿರ್ಮಲ ಮನಸ್ಸಿನಿಂದ ಒಂದು ತಂಬಿಗೆ ನೀರು ಸುರಿದರೆ ನಿಮ್ಮ ಸಾವಿರ ಸಮಸ್ಯೆ ಬಗೆಹರಿಯುತ್ತವೆ. ಭಕ್ತಿ, ನಿಷ್ಠೆಯಿಂದ ದೇವರನ್ನು ಸ್ಮರಿಸಿದರೆ ಯಾವುದೇ ರೀತಿ ಕಷ್ಟ ಹತ್ತಿರವೂ ಸುಳಿಯುವುದಿಲ್ಲ ಎಂದರು.
ವಿಜಯಪುರ ಜಿಲ್ಲೆ ಬುರಾಣಪುರದ ಮಾತೋಶ್ರೀ ಯೋಗೀಶ್ವರಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ ಗ್ರಾಮದ ಎಲ್ಲ ಧರ್ಮೀಯರು ತನು ಮನ ಧನದಿಂದ ಸಹಕಾರ ನೀಡಿದ್ದರಿಂದ ಸುಂದರವಾದ ಮಂದಿರದಲ್ಲಿ ಭವ್ಯ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಗೀತಾ ಮಾತಾಜಿ, ಇಂಗಳಕೇರೆ ಅಕ್ಕಮಹಾದೇವಿ, ಶಾಸಕ ಶರಣು ಸಲಗರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಹ್ಲಾದ್ ರಾಠೋಡ್, ಮಹಾದೇವ ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಮಹೇಶ ಕರಸಂಗಾ, ನ್ಯಾಯವಾದಿ ರಾಜಕುಮಾರ ವೀರಣ್ಣ ಪ್ರಮುಖರಾದ ಸತೀಶ ಕರಸಂಗಾ, ಸೋಮನಾಥ ಗಂಗಪ್ಪ, ಮಹೇಶ ಬಿರಾದಾರ, ಮಹಾದೇವ ಭೂಸೆ, ಧನರಾಜ ಭೂಸೆ, ಸುಭಾಷ ಮಂಠಾಳೆ, ಶರಣಪ್ಪ ಭೂಸೆ, ಸಂಗ್ರಾಮ ಪಾಟೀಲ, ದೇವಾನಂದ ಸ್ವಾಮಿ, ಶಂಕರಲಿಂಗ ಸ್ವಾಮಿ, ಚಂದ್ರಕಾಂತ ತೊಗರಖೇಡೆ, ಮನೋಜ ಸ್ವಾಮಿ, ಅಭಿಷೇಕ ಕರಸಂಗಾ, ಮಹೇಶ ಕರಮುಗುಳೆ, ರಾಮಲಿಂಗ ಕರಸಂಗಾ ಇತರರಿದ್ದರು.ನಾಗರಾಜ ವೀರಶೆಟ್ಟೆ ಸ್ವಾಗತಿಸಿ ನಿರೂಪಣೆ ಮಾಡಿದರು.
"

ಭಕ್ತಿ ಮಾರ್ಗದಲ್ಲಿ ನಡೆದರೆ ಮುಕ್ತಿ ದೊರೆಯುತ್ತದೆ. ಧರ್ಮದ ಏಳಿಗೆಗಾಗಿ ತಾವೆಲ್ಲರೂ ಶ್ರಮವಹಿಸುವ ಅಗತ್ಯವಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ಸಂಸ್ಕಾರವಂತರಾಗಬೇಕು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನಸ್ಸು ಎಲ್ಲರಲ್ಲಿ ಬರಬೇಕು.| ಶರಣು ಸಲಗರ ಶಾಸಕ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net