ನ್ಯಾಯಾಲಯಕ್ಕೆ ಮೂಲಸೌಕರ್ಯ ಒದಗಿಸಿ

ಕಮಲನಗರದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಆವರಣದಲ್ಲಿ ನಡೆಯುತ್ತಿರುವ ಸಂಚಾರಿ ನ್ಯಾಯಾಲಯದ ಕಟ್ಟಡ ಕಾಮಗಾರಿಯನ್ನು ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೀದರ್ ಆಡಳಿತಾತ್ಮಕ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಪರಿಶೀಲಿಸಿದರು. ಪ್ರವೀಣ ಪಾಟೀಲ್, ಬಾಲಾಜಿ ಕಂಬಾರ, ಚಂದ್ರಪಾಲ ಪಾಟೀಲ್, ನಾಗೇಂದ್ರ ಬಿರಾದಾರ, ಅನಿಲ್ ವಾಡೇಕರ್ ಇತರರಿದ್ದರು.
ಕಮಲನಗರದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಆವರಣದಲ್ಲಿ ನಡೆಯುತ್ತಿರುವ ಸಂಚಾರಿ ನ್ಯಾಯಾಲಯದ ಕಟ್ಟಡ ಕಾಮಗಾರಿಯನ್ನು ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೀದರ್ ಆಡಳಿತಾತ್ಮಕ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಪರಿಶೀಲಿಸಿದರು. ಪ್ರವೀಣ ಪಾಟೀಲ್, ಬಾಲಾಜಿ ಕಂಬಾರ, ಚಂದ್ರಪಾಲ ಪಾಟೀಲ್, ನಾಗೇಂದ್ರ ಬಿರಾದಾರ, ಅನಿಲ್ ವಾಡೇಕರ್ ಇತರರಿದ್ದರು.
Published on
ಕಮಲನಗರ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಆವರಣದಲ್ಲಿ ನಡೆಯುತ್ತಿರುವ ಸಂಚಾರಿ ನ್ಯಾಯಾಲಯದ ಕಟ್ಟಡ ಕಾಮಗಾರಿಯನ್ನು ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೀದರ್ ಆಡಳಿತಾತ್ಮಕ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಭೇಟಿ ನೀಡಿ ಪರಿಶೀಲಿಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲ ಅಭಿಯಂತರ ಶಿವಶಂಕರ ಕಾಮಶೆಟ್ಟೆ ಜತೆ ಕಟ್ಟಡ ಕಾಮಗಾರಿ ಕುರಿತು ಚರ್ಚಿಸಿದರು. ನ್ಯಾಯಾಲಯದ ಕೋಣೆಗೆ (ಕೋರ್ಟ್ ಹಾಲ್) ತೆರಳಿದ ಅವರು ವಾದಿ ಮತ್ತು ಪ್ರತಿವಾದಿಗಳಿಗೆ ಎರಡು ಪ್ರತ್ಯೇಕ ಟೇಬಲ್‌ಗಳನ್ನು ಅಳವಡಿಸತಕ್ಕದು. ನ್ಯಾಯಾಲಯದಲ್ಲಿ ವಕೀಲರು ಕುಳಿತುಕೊಳ್ಳಲು ಮತ್ತು ಅಗತ್ಯ ಮಾಹಿತಿ ಕಲ್ಪಿಸಲು ವಿಶೇಷ ವ್ಯವಸ್ಥೆ ಕಲ್ಪಿಸಬೇಕು. ಕಕ್ಷಿದಾರರ ಕಟಕಟೆ ಸರಿಪಡಿಸಿ ಸೂಕ್ತ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ ಕಲ್ಪಿಸಲು ಪ್ರಥಮ ಆದ್ಯತೆ ನೀಡಬೇಕು. ಹೀಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯದ ಕೋಣೆಗಳನ್ನು ಪಡೆದು ಶೀಘ್ರ ಕಾಮಗಾರಿ ಆರಂಭಿಸಬೇಕು.ಇದಕ್ಕೆ ಬೇಕಾಗುವ ಅನುದಾನ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿ ಶಿವಶಂಕರ ಕಾಮಶೆಟ್ಟೆ ಅವರಿಗೆ ತಿಳಿಸಿದರು.
ಸಂಚಾರಿ ನ್ಯಾಯಾಲಯ ಆರಂಭಿಸಲು ಮುಖಂಡ ಪ್ರವೀಣ ಪಾಟೀಲ್ ಅವರ ನಿರಂತರ ಪ್ರಯತ್ನ ಕಾರಣವಾಗಿದೆ. ನೂತನ ತಾಲೂಕಿನ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ಶಾಂತಿವರ್ಧಕ ಕಾಲೇಜಿಗೆ ಭೇಟಿ : ಶಾಂತಿವರ್ಧಕ ಪಪೂ ಕಾಲೇಜಿಗೆ ನ್ಯಾಯಮೂರ್ತಿಗಳು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ವಿದ್ಯಾರ್ಥಿಗಳು ಒಳ್ಳೆಯ ರೀತಿಯಿಂದ ವಿದ್ಯಾಭ್ಯಾಸ ಮಾಡಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಹಾಗೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಿ ಪ್ರತಿಯೊಬ್ಬ ವಿದ್ಯಾರ್ಥಿ ವರ್ಷಕ್ಕೆ ಒಂದು ಸಸಿ ನೆಟ್ಟು ಪಾಲನೆ ಪೋಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಾಗರಿಕ ಸನ್ಮಾನ: ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಪಟ್ಟಣಕ್ಕೆ ಭೇಟಿ ನೀಡಿದಾಗ, ವಿವಿಧ ಸಂಘಟನೆಯ ಪದಾಧಿಕಾರಿಗಳು, ರೈತ ಸಂಘದವರು, ವಕೀಲರು, ಸಾರ್ವಜನಿಕರು ಸನ್ಮಾನಿಸಿದರು.
ಔರಾದ್ ನ್ಯಾಯಾಧೀಶ ವಿನಾಯಕ ವಾನಖಂಡೆ, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಹಣಮಂತರಾಯ ಕೌಟಗೆ, ಮುಖಂಡ ಪ್ರವೀಣ ಪಾಟೀಲ್, ಔರಾದ ವಕೀಲರ ಸಂಘದ ಅಧ್ಯಕ್ಷ ಬಾಲಾಜಿ ಕಂಬಾರ, ವಕೀಲರಾದ ಚಂದ್ರಪಾಲ ಪಾಟೀಲ್, ನಾಗೇಂದ್ರ ಬಿರಾದಾರ, ಅನಿಲ್ ವಾಡೇಕರ್, ಸಚಿನ್ ಶೇಗೆದಾರ ಇತರರಿದ್ದರು.
"

ನೂತನ ತಾಲೂಕು ಕಮಲನಗರದಲ್ಲಿ ಸಂಚಾರಿ ನ್ಯಾಯಾಲಯ ಕಟ್ಟಡದ ಉದ್ಘಾಟನೆ ಸಾಧ್ಯವಾದರೆ ಡಿಸೆಂಬರ್‌ನಲ್ಲಿ ಮಾಡಲಾಗುವುದು. ಗಡಿಭಾಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶೀಘ್ರದಲ್ಲಿ ನ್ಯಾಯಾಲಯದ ಕಲಾಪ ಆರಂಭಿಸಲಾಗುವುದು.

| ಸಂಜೀವಕುಮಾರ ಹಂಚಾಟೆಹೈಕೋರ್ಟ್ ನ್ಯಾಯಮೂರ್ತಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net