ಎಲ್ಲರಲ್ಲಿರಲಿ ಪರಿಸರ ಸಂರಕ್ಷಣೆ ಕಾಳಜಿ

ಬಸವಕಲ್ಯಾಣದ ಎಸ್​ಎಸ್​ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ  ಆಯೋಜಿಸಿದ್ದ  ಎನ್​ಎಸ್​ಎಸ್​ ವಿಶೇಷ ವಾರ್ಷಿಕ ಶಿಬಿರದ ಸಮಾರೋಪದಲ್ಲಿ  ಡಾ.ಬಸವರಾಜ ಎವಲೆ, ಪ್ರಾಚಾರ್ಯ ಡಾ.ಶಿವಕುಮಾರ್​ ಪಾಟೀಲ್​, ಪ್ರೊ.ಡಿ.ಎಸ್​.ಪಾಟೀಲ್​, ಡಾ.ಸುರೇಶ ಎಚ್​.ಆರ್​., ಮಹಾದೇವ ದೇಗಾಂವ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವರಾಜ ಎವಲೆ ಸಲಹೆ
  • ಕಲ್ಯಾಣದಲ್ಲಿ ಎನ್​ಎಸ್​ಎಸ್​ ಶಿಬಿರ ಸಮಾರೋಪ
ಬಸವಕಲ್ಯಾಣ: ಸೇವಾ ಮನೋಭಾವನೆ ಮತ್ತು ಪರಿಸರ ಸಂರಕ್ಷಣೆಗೆ ಕಾಳಜಿ ಅವಶ್ಯಕ ಎಂದು ಎಸ್​ಎಸ್​ಬಿಕೆ ಕಾಲೇಜಿನ ನಿರ್ದೇಶಕ ಡಾ.ಬಸವರಾಜ ಎವಲೆ ಹೇಳಿದರು.
ನಗರದ ಎಸ್​ಎಸ್​ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಬೀದರ್​ ವಿವಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎನ್​ಎಸ್​ಎಸ್​ ವಿಶೇಷ ವಾರ್ಷಿಕ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿತಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸುತ್ತಲಿನ ಪರಿಸರದ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್​ ಮಾತನಾಡಿ, ಎಲ್ಲ ಶಿಬಿರಾರ್ಥಿಗಳು ಒಂದು ವಾರದ ಶಿಬಿರವನ್ನು ಸೂತ್ರದಂತೆ ಮುಂದುವರಿಸಿಕೊಂಡು ಹೋಗಬೇಕು. ಆಗ ನೀವು ಜೀವನಪೂರ್ತಿ ಇದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಎಸ್​ .ಪಾಟೀಲ್​ ಮಾತನಾಡಿ, ಶಿಬಿರಾರ್ಥಿಗಳು ಜೀವನದಲ್ಲಿ ಕಾಯಕ ಮತ್ತು ದಾಸೋಹ ಅಳವಡಿಸಿಕೊಳ್ಳುವುದು ಅವಶ್ಯಕ ಎಂದರು.
ಎನ್​ಎಸ್​ಎಸ್​ ಅಧಿಕಾರಿಗಳಾದ ಡಾ.ಸುರೇಶ್​ ಎಚ್​.ಆರ್​. ಹಾಗೂ ಮಹಾದೇವ ದೇಗಾಂವ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net