ಪ್ರತಿಯೊಬ್ಬರೂ ಜನಗಣತಿಗೆ ಸಹಕರಿಸಿ

ಕಮಲನಗರದ ಶ್ರೀ ಸಿದ್ಧರಾಮೇಶ್ವರ ಡಿಗ್ರಿ ಕಾಲೇಜಿನಲ್ಲಿ ಮಂಗಳವಾರ ಗಣತಿದಾರರಿಗೆ ಏರ್ಪಡಿಸಿದ್ದ ಜನಗಣತಿ  ತರಬೇತಿ ಕಾರ್ಯಾಗಾರಕ್ಕೆ ತಹಸೀಲ್ದಾರ್​ ಅಮಿತಕುಮಾರ ಕುಲಕರ್ಣಿ ಚಾಲನೆ ನೀಡಿದರು.ಡಾ.ರಮೇಶ ಚವ್ಹಾಣ್​, ಡಾ. ಬಾಲಾಜಿ ಬೋಂಡ್ಲೆ, ಡಾ.ಶೇಕಪ್ಪ, ಶಶಿಕಾಂತ ಬಿಡವೆ, ಡಾ. ವಿಶ್ವನಾಥ ಬೋಂಡ್ಲೆ ಇತರರಿದ್ದರು.
ಕಮಲನಗರದ ಶ್ರೀ ಸಿದ್ಧರಾಮೇಶ್ವರ ಡಿಗ್ರಿ ಕಾಲೇಜಿನಲ್ಲಿ ಮಂಗಳವಾರ ಗಣತಿದಾರರಿಗೆ ಏರ್ಪಡಿಸಿದ್ದ ಜನಗಣತಿ ತರಬೇತಿ ಕಾರ್ಯಾಗಾರಕ್ಕೆ ತಹಸೀಲ್ದಾರ್​ ಅಮಿತಕುಮಾರ ಕುಲಕರ್ಣಿ ಚಾಲನೆ ನೀಡಿದರು.ಡಾ.ರಮೇಶ ಚವ್ಹಾಣ್​, ಡಾ. ಬಾಲಾಜಿ ಬೋಂಡ್ಲೆ, ಡಾ.ಶೇಕಪ್ಪ, ಶಶಿಕಾಂತ ಬಿಡವೆ, ಡಾ. ವಿಶ್ವನಾಥ ಬೋಂಡ್ಲೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ಅಮಿತಕುಮಾರ ಕುಲಕರ್ಣಿ ಮನವಿ
  • ಕಮಲನಗರದಲ್ಲಿ ತರಬೇತಿ ಕಾರ್ಯಗಾರ
 ಕಮಲನಗರ: ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕಾದರೆ ನಿಖರವಾದ ಅಂಕಿ&ಅಂಶಗಳ ಅವಶ್ಯಕತೆಯಿದೆ. ಈ ಹಿನ್ನಲೆಯಲ್ಲಿ ನಡೆಯುತ್ತಿರುವ ಸ್ವಯಂ ಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್​ ಅಮಿತಕುಮಾರ ಕುಲಕರ್ಣಿ ಮನವಿ ಮಾಡಿದರು.
ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಡಿಗ್ರಿ ಕಾಲೇಜಿನಲ್ಲಿ ಮಂಗಳವಾರ ಮೇಲ್ವಿಚಾರಕರು ಮತ್ತು ಗಣತಿದಾರರಿಗೆ ಏರ್ಪಡಿಸಿದ್ದ ಜನಗಣತಿ&2027  ತರಬೇತಿ ಕಾರ್ಯಾಗಾರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು , ಜನಗಣತಿ&2027 ಸಂಬಂಧ ಸ್ವಯಂ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಏ.15ರವರೆಗೆ ಸಾರ್ವಜನಿಕರಿಗೆ ಅವಕಾಶ ಇದೆ. ಸಾರ್ವಜನಿಕರು ತಮ್ಮ ಮೊಬೈಲ್​ ಅಥವಾ ಲ್ಯಾಪ್​ಟ್ಯಾಪ್​ ಮೂಲಕ ಆನಲೈನ್​ ಪೊರ್ಟಲ್​ಗೆ ಭೇಟಿ ನೀಡಿ, ಕುಟುಂಬದ ಮಾಹಿತಿಯನ್ನು ಅವರೇ ನಮೂದಿಸಬಹುದು ಎಂದರು.
ಹಿರಿಯ ಮಾಸ್ಟರ್​ ತರಬೇತಿದಾರ ಪೊ. ಎಸ್​.ಎನ್​.ಶಿವಣಕರ್​ ಮಾತನಾಡಿ, ಸಾರ್ವಜನಿಕರು ಸ್ವತ@ ತಾವೇ ಮೊಬೈಲ್​ ಮೂಲಕ ಗಣತಿ ಮಾಡಿಸಿಕೊಳ್ಳಲು ಅವಕಾಶವಿದೆ. ಮೊಬೈಲ್​ ಸಂಖ್ಯೆಗೆ ಬರುವ ಒಟಿಪಿ ಬಳಸಿ ಲಾಗಿನ್​ ಆಗಿ, ಕೇಳುವ ಮಾಹಿತಿಯನ್ನು ತುಂಬಿದ ನಂತರ ಎಸ್​ಇಐಡಿ ಸಿಗುತ್ತದೆ. ಅದನ್ನು ಸುರತವಾಗಿ ಇಟ್ಟುಕೊಳ್ಳಬೇಕು. ನಂತರ ಗಣತಿದಾರರು ಮನೆಗೆ ಬಂದಾಗ ಆ ಐಡಿ ನೀಡಬೇಕು. ನೀವು ನೀಡುವ ಮಾಹಿತಿ ಗೌಪ್ಯವಾಗಿರುತ್ತದೆ ಎಂದು ಹೇಳಿದರು.
ಏ.16ರಿಂದ ಮನೆಪಟ್ಟಿ ಗಣತಿ ಆರಂಭವಾಗಲಿದೆ. ತರಬೇತಿಯಲ್ಲಿ ಭಾಗವಹಿಸಿದವರು ಎಲ್ಲ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಯಾವುದೇ ಅನುಮಾನ ಇದ್ದರೆ ತಕ್ಷಣ ಮಾಸ್ಟರ್​ ತರಬೇತುದಾರರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಮನೆಪಟ್ಟಿ ಗಣತಿ ವೇಳೆ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.
ಕಾಲೇಜು ಪ್ರಾಂಶುಪಾಲ ಡಾ.ರಮೇಶ ಚವ್ಹಾಣ್​ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್​ಎಸ್​ಎಸ್​  ಯೋಜನಾಧಿಕಾರಿ ಡಾ. ಬಾಲಾಜಿ ಬೋಂಡ್ಲೆ, ಡಾ.ಶೇಕಪ್ಪ, ಸಿಆರ್​ಪಿ ಶಶಿಕಾಂತ ಬಿಡವೆ, ಡಾ. ವಿಶ್ವನಾಥ ಬೋಂಡ್ಲೆ,  ಶಿವಾನಂದ ಪಾಟೀಲ, ಗೋಪಾಲಕೃಷ್ಣ, ಶ್ರೀಕಾಂತ, ಪ್ರವಿಣ ಸೇರಿದಂತೆ ಹಲವು ಅಧಿಕಾರಿಗಳು, ಶಿಕ್ಷಕರು ಹಾಗೂ ಶಿಕ್ಷಕಿಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net