

ಬೀದರ್: ಅಕ್ಕ ಮಹಾದೇವಿ ಅವರ ಜೀವನ ಚರಿತ್ರೆ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದಿಂದ ಪ್ರತಿ ವರ್ಷ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ಕೆ. ರಹಾಟಕರ್ ಹೇಳಿದರು.
ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನ ಅಕ್ಕ ಮಹಾದೇವಿ ಚೈತನ್ಯ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಏಕ್ ಲಾಖ್ ಪೇಡ್ ಗುರು ಮಾತಾ ಕೇ ನಾಮ್ ಅಭಿಯಾನದ ಸಮಾರೋಪ ಹಾಗೂ ಅಕ್ಕ ಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರುದ್ರಾಕ್ಷಿ ಸಸಿ ನೆಟ್ಟು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದ ಶರಣೆ ಅಕ್ಕಮಹಾದೇವಿ ಸ್ತ್ರೀಯರಿಗೆ ಆದರ್ಶಪ್ರಾಯರಾಗಿದ್ದಾರೆ. ಹೀಗಾಗಿ ಅವರ ಜೀವನ ಹಾಗೂ ಸಾಧನೆಗಳನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮಹಿಳಾ ಆಯೋಗವು ಹೆಣ್ಣುಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ವ ಪ್ರಯತ್ನ ನಡೆಸುತ್ತಿದೆ. ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರೂ ತಾಯಿ ಹೆಸರಲ್ಲಿ ಒಂದು ಸಸಿ ನೆಡಲು ಕರೆ ಕೊಟ್ಟಿದ್ದರು. ಶಿವಯ್ಯ ಸ್ವಾಮಿ ಅವರು ಗುರುವಿನ ಹೆಸರಲ್ಲಿ ಒಂದು ಲಕ್ಷ ಸಸಿ ವಿತರಿಸಿ ಗುರು ಹಾಗೂ ಮಹಿಳೆಯರನ್ನು ಗೌರವಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ಕ ಮಹಾದೇವಿ ಚೈತನ್ಯ ಪೀಠದ ಸಂಯೋಜಕ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ಮಾತೆ ಕರುಣಾದೇವಿ ಅವರು ಐದು ದಶಕದಿಂದ ಸಮಾಜೋ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಾದ್ಯಂತ ಐದು ಭಾಷೆಗಳಲ್ಲಿ ಅಕ್ಕ ಮಹಾದೇವಿ ಅವರ ಜೀವನ ಮತ್ತು ಸಾಧನೆಗಳ ಪ್ರಚಾರ ಹಾಗೂ ಪ್ರಸಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಜನನಿ, ಜನ್ಮಭೂಮಿ ಹಾಗೂ ಗೋಮಾತೆಯನ್ನು ಗೌರವಿಸಲು ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಎಲ್ಲರ ಸಹಕಾರದಿಂದ ಅಭಿಯಾನ ಯಶಸ್ವಿಯಾಗಿದೆ. ಅಭಿಯಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ನಮ್ಮ ಶ್ರಮ ಸಾರ್ಥಕವಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಸುಭಾಷ್ ಕಲ್ಲೂರ ಮಾತನಾಡಿ, ಮಾತೆ ಕರುಣಾದೇವಿ ಅವರು ಅಕ್ಕಮಹಾದೇವಿ ಅವರ ಪ್ರತಿರೂಪವಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಜನಿಸಿದ ಅವರು ದೇಶದಾದ್ಯಂತ ಹೆಸರು ಮಾಡಿರುವುದು ಜಿಲ್ಲೆಗೆ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ಕೆ. ರಹಾಟಕರ್ ಹಾಗೂ ತೆಲಂಗಾಣ ರಾಜ್ಯ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ನೇತಿ ಮಹೇಶ್ವರ ಅವರಿಗೆ ಅಕ್ಕ ಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಕ್ಕ ಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಾತೆ ಕರುಣಾದೇವಿ ಸಾನಿಧ್ಯ ವಹಿಸಿದ್ದರು. ಆಂಧ್ರಪ್ರದೇಶ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ರಾಯಪಟಿ ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ರಾಚೋಟಿ ವೀರಭದ್ರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸಿ.ಎಂ. ಶಿವಶರಣಪ್ಪ, ನಂದ್ಯಾಳ್ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಶ್ರೀಧರ ರೆಡ್ಡಿ, ನಂದ್ಯಾಳ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲೀಲಾವತಿದೇವಿ, ರಾಷ್ಟ್ರೀಯ ಮಹಿಳಾ ಆಯೋಗದ ಉಪ ನಿರ್ದೇಶಕ ರಾಮಅವತಾರ ಸಿಂಗ್, ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ರಾಚೋಟಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಜಂಟಿ ಕಾರ್ಯದರ್ಶಿ ಸುಬ್ಬಯ್ಯ ಸ್ವಾಮಿ ರಾಚೋಟಿ, ಮುಖಂಡರಾದ ಪ್ರವೀಣಕುಮಾರ ಕೋರಪೆÇೀಲೆ, ಕಾಶಿನಾಥ ಹಿರೇಮಠ, ಯೋಗೇಶ್ ಚಡಚಣಕರ್, ಓಂಪ್ರಕಾಶ್ ರೊಟ್ಟೆ, ಕಾವೇರಿ ಸ್ವಾಮಿ, ಕಾಶಿನಾಥ ಜಕ್ಕಾ, ನಾಗೇಶ ಕಲ್ಲೂರ, ಪ್ರವೀಣ್ ಸ್ವಾಮಿ, ಶಿವಶಂಕರ ಬೆಳಮಗಿ, ಅಮರೇಶ ಕಮಠಾಣೆ, ಶ್ರೀಕಾಂತ ಹೊನ್ನಿಕೇರಿ, ಗಂಗಾಧರ ಸ್ವಾಮಿ, ವಿಶ್ವನಾಥ ದಾನಿ, ಬಸವರಾಜ ಹಾಲಹಳ್ಳಿ, ಅನಂತಸ್ವಾಮಿ, ಶಿವಕುಮಾರ ಸಂಗೊಳ್ಳಿ, ಕಾಶಿನಾಥ ಬಿರಾದಾರ, ಗುರುದೇವಿ, ಅಶ್ವಿನಿ, ಸುನಿತಾ, ಪೂಜಾ ಮತ್ತಿತರರು ಇದ್ದರು.
ವಿದ್ಯಾ ಗುಬ್ಬಿತೋಟದಪ್ಪ ನಿರೂಪಿಸಿದರು. ನಟರಾಜ ಸ್ವಾಮಿ ಸ್ವಾಗತಿಸಿದರು. ರಾಕೇಶ್ ಮಠಪತಿ ವಂದಿಸಿದರು.