

ಬಸವಾದಿ ಶರಣರ ತತ್ವಗಳು ಜಗದಗಲವಾಗಿ ಪ್ರಸಾರವಾಗಬೇಕು ಎನ್ನುವ ಆಶಯದೊಂದಿಗೆ ಡಾ.ಚನ್ನಬಸವ ಪಟ್ಟದ್ದೇವರು ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ದುಡಿದರು. ಅನುಭವ ಮಂಟಪ ಉತ್ಸವ ಮೂಲಕ ಕನ್ನಡ ನಾಡಿನ ಹಾಗೂ ಹೊರನಾಡಿನ ಬಸವ ಭಕ್ತರನ್ನು ಒಗ್ಗೂಡಿಸಿ, ಬಸವಪ್ರಜ್ಞೆ ಜಾಗೃತಗೊಳಿಸುವುದಕ್ಕಾಗಿ ಅವಿಶ್ರಾಂತವಾಗಿ ಕಾರ್ಯ ಮಾಡುತ್ತಿದ್ದಾರೆ.
| ಶ್ರೀ ಗುರುಬಸವ ಪಟ್ಟದ್ದೇವರುಹಿರೇಮಠ ಸಂಸ್ಥಾನ, ಭಾಲ್ಕಿ
ಪ್ರತಿವರ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ಶರಣ ಕಮ್ಮಟ ಮತ್ತು ಅನುಭವ ಮಂಟಪದ ಉತ್ಸವದ ಮೂಲಕ ಬಸವ ತತ್ವ ಪ್ರಚಾರ, ಪ್ರಸಾರ ಕಾರ್ಯವನ್ನು ನಡೆಯುತ್ತಿದೆ. ಕಾಯಕವೇ ಕೈಲಾಸ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಬಸವಣ್ಣನವರು ಹೇಳಿದ್ದಾರೆ. ಬಸವ ತತ್ವದಂತೆ ನಡೆಯಲು ಪ್ರಯತ್ನಿಸಬೇಕು.
| ವಿಜಯಸಿಂಗ್ವಿಧಾನ ಪರಿಷತ್ ಮಾಜಿ ಸದಸ್ಯ