ಕರ್ತವ್ಯ ನಿರತ ವೈದ್ಯನ ಮೇಲೆ ಹಲ್ಲೆ

ಹಲ್ಲೆಗೆ ಒಳಗಾದ ವೈದ್ಯ ತುಕರಾಮ
ಹಲ್ಲೆಗೆ ಒಳಗಾದ ವೈದ್ಯ ತುಕರಾಮ
Published on
ಬೀದರ್: ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯಲ್ಲಿ ಕರ್ತವ್ಯ ನಿರತ ವೈದ್ಯನ ಮೇಲೆ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ. ಡಾ.ತುಕರಾಮ ಮಚೀಂದ್ರ ಹಲ್ಲೆಗೊಳಾದ ವೈದ್ಯ.
ಬೈಕ್ ಸ್ಕಿಡ್ ಆಗಿ ಚಿಕಿತ್ಸೆಗಾಗಿ ತಾಲೂಕಿನ ಬೆನಕನಳ್ಳಿ ಗ್ರಾಮದ ವಿಜಯಸಿಂಗ್ ತುಕರಾಮ ಚವ್ಹಾಣ್ ಬ್ರಿಮ್ಸ್ಗೆ ದಾಖಲಾಗಿದ್ದ. ಈ ವೇಳೆ ವಿಜಯಸಿಂಗ್ ಸಂಬಂಧಿಕರು ಆಗಮಿಸಿ ಸರಿಯಾಗಿ ಚಿಕಿತ್ಸೆ ನೀಡಬೇಕು, ಏನಾದರೂ ಹೆಚ್ಚು ಕಡಿಮೆಯಾದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಬ್ರಿಮ್ಸ್ ಸಿಬ್ಬಂದಿ ಆಗಮಿಸಿ ಗಲಾಟೆ ಹತೋಟಿಗೆ ತಂದಿದ್ದಾರೆ. ಗಾಯಗೊಂಡ ಡಾ.ತುಕರಾಮ ಅವರಿಗೆ ಬ್ರಿಮ್ಸ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆದಿತ್ಯ ತಾಜಲಾಪುರ, ವಿನೋದ ಚಾಂಬೋಳ, ಗೋವಿಂದ ಬೆನಕನಳ್ಳಿ, ಅನೀಲ ಬೆನಕನಳ್ಳಿ, ಮಹಾದೇವ ಬೆನಕನಳ್ಳಿ, ಬಾಲಾಜಿ ತಾಜಲಾಪುರ, ಪವನ್ ಚಾಂಬೋಳ ಹಾಗೂ ಇತರರ ವಿರುದ್ಧ ಡಾ.ತುಕರಾಮ ನೀಡಿದ ದೂರಿನ ಮೇರೆಗೆ ನೂತನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲ ಏಳು ಜನರನ್ನು ಬಂಧಿಸಲಾಗಿದೆ.
ಪ್ರತಿಭಟನೆ: ಘಟನೆ ಖಂಡಿಸಿ ಶುಕ್ರವಾರ ಬ್ರಿಮ್ಸ್ನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾಥರ್ಿಗಳು ಮಿಂಚಿನ ಪ್ರತಿಭಟನೆ ನಡೆಸಿದರು. ವೈದ್ಯರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net