ಬಸವಕಲ್ಯಾಣ: ನಂಬಿಕೆ, ಭಕ್ತಿ, ಶ್ರದ್ಧೆಯಿಂದ ಸದ್ಗುರುವಿನ ಸಾನ್ನಿಧ್ಯದಲ್ಲಿ ನತಮಸ್ತಕರಾಗುವ ಭಕ್ತರ ಇಷ್ಟಾರ್ಥ ಈಡೇರುತ್ತವೆ ಎಂದು ಮಹಾರಾಷ್ಟ್ರದ ತಮಲೂರಿನ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ 40ನೇ ಜನ್ಮದಿನೋತ್ಸವ ಹಾಗೂ 21ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮಸಭೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗವಿಮಠಕ್ಕೆ 12ನೇ ಶತಮಾನಕ್ಕೂ ಮುಂಚಿನ ಇತಿಹಾಸವಿದೆ. ಇಲ್ಲಿ ಅಧ್ಯಾತ್ಮದ ಶಕ್ತಿ ಇದೆ. ಆದಾಯ ತರುವ ಆಸ್ತಿ ಇಲ್ಲದೆ ಭಕ್ತರ ಸಹಾಯದಿಂದ ಅಭಿನವ ಶ್ರೀಗಳು ಗವಿಮಠದ ಪ್ರಗತಿಯ ಜತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಜನ್ಮ ದಿನೋತ್ಸವದ ನಿಮಿತ್ತ ಕ್ಯಾನ್ಸರ್ಮುಕ್ತ ಜೀವನಕ್ಕಾಗಿ ಜನ ಜಾಗೃತಿಗಾಗಿ ಪಾದಯಾತ್ರೆ ನಡೆಸಲಾಗಿದೆ. ಇಂದು ಯುವ ಕ್ರಾಂತಿ ಸಂಘಟನೆಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಅಪಾರದಲ್ಲಿರುವರ ಜೀವ ಉಳಿಸಲು ಸಹಕಾರಿಯಾಗುತ್ತದೆ. ಹೀಗಾಗಿ ಮಾನವೀಯ ಧರ್ಮವೇ ಆಗಿದೆ ಎಂದರು.
ಬೇರೆಯವರ ಜೀವ ಉಳಿಸಲು ಭಕ್ತರೇ ಮಠದ ದೊಡ್ಡ ಆಸ್ತಿ, ಅವರ ಸಹಕಾರದಿಂದಲೇ ಮಠದ ಪ್ರಗತಿ ಕಾರ್ಯ ನಡೆದಿದೆ. ಅವರ ಒಳಿತಾಗಬೇಕು. ಅವರಿಗೆ ಎದುರಾಗುವ ಸಂಕಷ್ಟಗಳು ದೂರವಾಗಲಿ, ಅವರು ಸುಖ, ಶಾಂತಿಯಿಂದ ಇರಲಿ ಎಂದು ಘನಲಿಂಗ ರುದ್ರಮುನಿ ಗುರುಗಳಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸಾಹಿತಿ ವೀರಶೆಟ್ಟಿ ಪಾಟೀಲ್ ಬರೆದ ಅಭಿನವ ಶ್ರೀ ಪ್ಲಾಸ್ಟಿಕಮುಕ್ತ ಸಮಾಜದ ದೀಪಸ್ತಂಭ (ಪರಿಸರ ಜಾಗೃತಿ ಕೃತಿ) ಹಾಗೂ ಸುನೀತಾ ಪಾಟೀಲ ಸಂಪಾದಿಸಿರುವ ಪ್ಲಾಸ್ಟಿಕ್ಮುಕ್ತ ಸಮಾಜದತ್ತ ಅಭಿನವ ಶ್ರೀಗಳ ಹಸಿರು ಹೆಜ್ಜೆ, ಲೇಖನಗಳ ಗ್ರಂಥವನ್ನು ಅಭಿನವ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಬೀದರ್ನ ಹಿತಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಗ್ರಂಥ ಪರಿಚಯ ಮಾಡಿಕೊಟ್ಟರು.
ಗೌರವ ಸನ್ಮಾನ ಸ್ವೀಕರಿಸಿದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ಶಿವಯ್ಯ ಸ್ವಾಮಿ, ನವ ಕಲ್ಯಾಣ ಕರ್ನಾಟಕ ಮಹಾಸಭಾ ಕಾರ್ಯದರ್ಶಿ ಡಾ.ಶಂಕರಗೌಡ, ನೂರ್ ಮೊಹ್ಮದ್ ಎಂ. ಮಾತನಾಡಿದರು.
ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಗ್ರಂಥ ದಾಸೋಹಿ ಡಾ.ಸಂಜುಕುಮಾರ ಬೆಂಟೂರ, ಕಲ್ಯಾಣ ನಾಡು ಗ್ರಾಮೀಣ ಜನಪದ ಕಲಾವೃಂದ ವೀರಶೆಟ್ಟಿ ಮಲಶೆಟ್ಟಿ, ಗ್ರಂಥ ಲೇಖಕ ವೀರಶೆಟ್ಟಿ ಎಂ.ಪಾಟೀಲ, ಸುನೀತಾ ಎಸ್. ಪಾಟೀಲ್ ಇದ್ದರು. ರುದ್ರೇಶ್ವರ ಗೋರ್ಟಾ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗೂಡೆ ನಿರೂಪಣೆ ಮಾಡಿದರು. ಸೂರ್ಯಕಾಂತ ಬಿರಾದಾರ ಖಾನಾಪುರ ಪ್ರಾರ್ಥನೆ, ಕಲಾವಿದ ರಾಹುಲ ತುತಾರೆ, ವಿವೇಕ ವಸ್ತ್ರದ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶ್ರೀ ಗುರು ಮಹಾಲಿಂಗೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಂದ ನಡೆದ ನೃತ್ಯ ಗಮನ ಸೆಳೆಯಿತು.
ರಕ್ತದಾನ ಶಿಬಿರ: ಗವಿಮಠದ ಪರಿಸರದಲ್ಲಿ ಅಭಿನವ ಶ್ರೀಗಳ ಜನ್ಮದಿನೋತ್ಸವ ಹಾಗೂ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ನಿಮಿತ್ತ ಯುವ ಕ್ರಾಂತಿ ಸಂಘಟನೆಯ ವತಿಯಿಂದ ಆಯೋಜಿಸಿದ್ದ ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು. ರಕ್ತದಾನ ಮಾಡಿದ ದಾನಿಗಳಿಗೆ ಹೆಲ್ಮೆಟ್ ವಿತರಿಸಲಾಯಿತು. ಸಂಘಟನೆಯ ಮುಖಂಡ ಶ್ರೀನಿವಾಸ ರಡ್ಡಿ, ಜಿಲ್ಲಾಧ್ಯಕ್ಷ ಸಂಗಮೇಶ ಭೂರೆ, ಜಿಲ್ಲಾ ಉಪಾಧ್ಯಕ್ಷ ಸಚಿನ್ ಮೋಳಕೆರೆ, ತಾಲೂಕು ಅಧ್ಯಕ್ಷ ನವನಾಥ ಮೇತ್ರೆ, ಮಂಠಾಳ ವಲಯದ ಅಧ್ಯಕ್ಷ ಸಂದೀಪ ಪಾಟೀಲ, ಶಿವಕುಮಾರ ಬಿರಾದಾರ, ರವಿ ನಾವದಗೆಕರ, ವಿನೋದ ಬಡಗೆ, ಸಚಿನ್ ರಡ್ಡಿ, ಜ್ಞಾನೇಶ್ವರ ರಾಚ್ಚಪನೋರ್, ಮಲ್ಲಾರಡ್ಡಿ ಶಿವನ್ನೋರ್, ವೈಭವ ಗೋಸ್ವಾಮಿ ಇತರರಿದ್ದರು.