ಕೇಂದ್ರ ಸರ್ಕಾರದ ಸಬ್ಸಿಡಿ ಹಿಂಪಡೆಯುವ ನಿರ್ಧಾರದಿಂದ ವಿಮಾನಯಾನ ಸೇವೆ ಕಳೆದ ವರ್ಷ ಸ್ಥಗಿತಗೊಂಡಿತು. ರಾಜ್ಯ ಸರ್ಕಾರದಿಂದಲೇ ಸಬ್ಸಿಡಿ ಹಣ ಭರಿಸಿ ವಾಯುಯಾನ ಸೇವೆ ಕಲ್ಪಿಸಲು ನಿರ್ಧರಿಸಲಾಗಿದೆ. ಸ್ಟಾರ್ ಏರ್‌ಲೈನ್ ಸಂಸ್ಥೆಯೊAದಿಗೆ (೨೦೨೫ರ ಏ.೧೫ರಿಂದ ೨೦೨೬ರ ಏ.೧೪) ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಏ.೧೫ರಿಂದ ಸೇವೆ ಸ್ಥಗಿತಗೊಳಿಸಿತು. ಸ್ಟಾರ್ ಏರ್‌ಲೈನ್ ಕಳೆದ ವರ್ಷಕ್ಕಿಂತ ಹೆಚ್ಚು ಅಂದರೆ ೨೨ ಕೋಟಿ ರೂ.ಗೆ ಪಟ್ಟು ಹಿಡಿದಿತ್ತು. ಅಧಿಕಾರಿಗಳ ಜತೆ ಜಿಲ್ಲಾಡಳಿತ ಸತತ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದು ಫಲ ನೀಡಿದೆ. ಮುಂದಿನ ಒಂದು ವರ್ಷದ ಅವಽಗೆ ವಿಮಾನಯಾನ ಪುನರಾರಂಭಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 14.25 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಇದಕ್ಕೆ ಸ್ಟಾರ್ ಏರ್‌ಲೈನ್ಸ್ ಸಹ ಸಮ್ಮತಿ ಸೂಚಿಸಿದೆ.