ಶನಿ ದೇವರ ಪರೀಕ್ಷೆ ಪ್ರದರ್ಶಿಸಿದ ಯಕ್ಷಗಾನ

ಬೀದರ್‍ನ ರಂಗಮಂದಿರದಲ್ಲಿ ಆಯೋಜಿಸಿದ್ದ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸಿದರು.
ಬೀದರ್‍ನ ರಂಗಮಂದಿರದಲ್ಲಿ ಆಯೋಜಿಸಿದ್ದ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸಿದರು.
Published on

ಬೀದರ್: ದಕ್ಷಿಣ ಕರಾವಳಿ ಕನ್ನಡ ಸಂಘದಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಶನಿ ದೇವರ ಪರೀಕ್ಷೆ, ಪ್ರಭಾವ, ಭಯದಿಂದ ಭಕ್ತಿ ಹುಟ್ಟಿಸುವುದು ಹಾಗೂ ಭಕ್ತರ ಮೇಲಿನ ಅನುಗ್ರಹದ ಮೇಲೆ ಬೆಳಕು ಚೆಲ್ಲಿತು.
ಉಡುಪಿಯ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು 'ಶನೀಶ್ವರ ಮಹಾತ್ಮೆ' ಪೌರಾಣಿಕ ಕಥಾ ಭಾಗವನ್ನು ಯಕ್ಷಗಾನದ ಮೂಲಕ ಕಣ್ಣಿಗೆ ಕಟ್ಟುವ ಹಾಗೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.
ಕೊಕ್ಕರ್ಣೆ ಸದಾಶಿವ ಅಮೀನ್, ಗಣೇಶ ಆಚಾರ್ಯ ಬಿಲ್ಲಾಡಿ, ಭಾಸ್ಕರ ದೇವಾಡಿಗ ಭಟ್ಕಳ್, ಕುಮಾರ್ ಅಮೀನ್ ಕೊಕ್ಕರ್ಣೆ, ದಿನಕರ ಕುಂದರ್ ನಡೂರು, ನಾಗರಾಜ ಪೂಜಾರಿ ದೇವಲ್ಕುಂದ, ರಾಘವೇಂದ್ರ ಸಾಲಿಯಾನ್ ತೀರ್ಥಳ್ಳಿ, ಹೆನ್ನಾಬೈಲು ವಿಶ್ವನಾಥ ಪೂಜಾರಿ, ರಾಘವೇಂದ್ರ ಶೆಟ್ಟಿ ಬಡಾಬಾಳು, ನಂದೀಶಕುಮಾರ್ ಬನ್ನಾಡಿ, ಶಿವಮೂರ್ತಿ ರಾವ್ ತಾರೆಕೊಡ್ಲು, ಸಂದೇಶ್ ಶೆಟ್ಟಿ ಕಕ್ಕುಂಜೆ ಸೇರಿ 20ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಪ್ರದರ್ಶನ ನಡೆಸಿಕೊಟ್ಟರು.
ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರು ವಿಷ್ಣುವಿನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಸ್ತ್ರೀ ಪಾತ್ರಧಾರಿಗಳು ಹಾಗೂ ಹಾಸ್ಯ ಕಲಾವಿದರು ಪ್ರೇಕ್ಷಕರನ್ನು ನಕ್ಕು ನಲಿಸಿದರು. ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕಲಾವಿದರನ್ನು ಪೆÇ್ರೀತ್ಸಾಹಿಸಿದರು.
ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಪ್ರದರ್ಶನವನ್ನು ಉದ್ಘಾಟಿಸಿದರು.
ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಕೆ. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅಪ್ಪಾರಾವ್ ಸೌದಿ, ರಾಘವೇಂದ್ರ ಅಡಿಗ, ಉಮೇಶ್ ನಾಯಕ್, ರವಿಚಂದ್ರ ಮೂರ್ತಿ, ರಾಘವೇಂದ್ರ ಮೂರ್ತಿ, ಸುರೇಶ್ ಆಚಾರ್ಯ ಮತ್ತಿತರರು ಇದ್ದರು. ರಘುರಾಮ ಉಪಾಧ್ಯಾಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net