ಹೊನ್ನಾ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ

ರವೀಂದ್ರಕಿರಣ ಹೊನ್ನಾ
ರವೀಂದ್ರಕಿರಣ ಹೊನ್ನಾ
Published on
ಬೀದರ್: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬೀದರ್ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಮಧ್ಯಾಹ್ನ 12.15ಕ್ಕೆ ನಗರದ ಕೆಇಬಿ ಎದುರಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

2026-2031ನೇ ಸಾಲಿಗಾಗಿ ಇತ್ತೀಚೆಗೆ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಸಮ್ಮತಿಯಿಂದ ಆಯ್ಕೆ ಮಾಡಲಾಗಿದೆ. ರವೀಂದ್ರಕಿರಣ ಹೊನ್ನಾ ಅವರಿಗೆ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇವರ ಜೊತೆಯಲ್ಲಿ ಇಡೀ ಜಿಲ್ಲಾ ಸಮಿತಿ ತಂಡ ಪದಗ್ರಹಣ ಮಾಡಲಿದೆ. ಸಮಾರಂಭ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ತಿಳಿಸಿದ್ದಾರೆ.

ಪದಗ್ರಹಣ ಸಮಾರಂಭಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ನಗರದ ಕೆಇಬಿ ಹತ್ತಿರದ ಹನುಮಾನ ಮಂದಿರದಿಂದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದವರೆಗೆ ನೂತನ ಪದಾಧಿಕಾರಿಗಳನ್ನು ಭವ್ಯ ಮೆರವಣಿಗೆ ಮೂಲಕ ಒಯ್ಯಲಾಗುವುದು. ಸಂಘದ ರಾಜ್ಯ ಅಧ್ಯಕ್ಷ ಸಿ.ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು ಸೇರಿ ಹಲವು ಪ್ರಮುಖರು ಪಾಲ್ಗೊಳ್ಳುವರು. ಇವರಿಗೂ ಸಹ ಅದ್ದೂರಿ ಸನ್ಮಾನ ನೀಡಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಎಲ್ಲೆಡೆಯಿಂದ ಸಂಘದ 500ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಮಧ್ಯಾಹ್ನ 12.15ಕ್ಕೆ ಸಂಘದ ರಾಜ್ಯ ಅಧ್ಯಕ್ಷ ಸಿ.ರಮೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಕಾರ್ಮಿಕ ಮುಖಂಡ ಕಾಶಿನಾಥ ಬೆಲ್ದಾಳೆ, ಪ್ರಮುಖರಾದ ಚಂದ್ರಶೇಖರ (ಕೋಟೆ ಶೇಕಿ), ಭರತ್‌ಕುಮಾರ್ ಎಸ್., ಶಿವಕುಮಾರ ಹಿರೇಮನಿ, ವೀರಭದ್ರಪ್ಪ ಸಾಲಿಮನಿ, ಸಚಿನ್ ಹುಂಡೇಕಾರ, ಶಶಿರೇಖಾ ಪಾಟೀಲ್, ರಮೇಶ್ ಪಾಟೀಲ್, ಗುರುಶಾಂತ ವಾರದ್, ಜಗನ್ನಾಥ ಖೆರುಜಿ, ಬಸವರಾಜ ಎಖೆಳ್ಳಿಕರ್, ಸೈಯದ್ ಅಫಜಲ್, ವೀರಣ್ಣಾ ಮುದ್ನಾಳೆ, ಸೂರ್ಯಕಾಂತ ಮಡಿವಾಳ, ಭರತ್‌ಭೂಷಣ, ಸುಮಂತ್ ಕಟ್ಟಿಮನಿ, ಬಸವರಾಜ ಜೈನಾಪುರೆ, ಮಲ್ಲಿಕಾರ್ಜುನ ಶೆಟಕಾರ್, ಗಣಪತಿ ಖೇಣಿಕರ್, ಮಹೇಶ ಫಾಳೆ ಇತರರು ಪಾಲ್ಗೊಳ್ಳುವರು. ಸಂಘದ ಕೇಂದ್ರ ಸಮಿತಿ ಆಡಳಿತ ಮಂಡಳಿ ಸದಸ್ಯರು, ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರು, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಗುತ್ತಿಗೆದಾರರು ಪಾಲ್ಗೊಳ್ಳಬೇಕು ಎಂದು ವೀರಶೆಟ್ಟಿ ಖ್ಯಾಮಾ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net