

ಬೀದರ್: ಗೊಂಡ ಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ಸಂಗೊಳ್ಳಿ ರಾಯಣ್ಣ ಜಯಂತಿ, ಸ್ವಾತಂತ್ರ್ಯೋತ್ಸವ ಹಾಗೂ ಯುವ ಜಾಗೃತಿ ಸಮಾವೇಶದ ಕಚೇರಿಯನ್ನು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ನಗರದಲ್ಲಿ ಉದ್ಘಾಟಿಸಿದರು.
ಒಕ್ಕೂಟದಿಂದ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.
ಕಾರ್ಯಕ್ರಮ ಆಗಸ್ಟ್ 16 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಯಶಸ್ವಿಗೆ ಭರದ ಸಿದ್ಧತೆಗಳು ನಡೆದಿವೆ ಎಂದು ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೋಡೆ ಮಾಹಿತಿ ನೀಡಿದರು.
ಶಾಸಕ ರಹೀಂಖಾನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಪ್ರಮುಖರಾದ ಬಸವರಾಜ ಮಾಳಗೆ, ಬಾಬು ಸಂಗೋಳಗಿ, ಮಾಣಿಕ ಲದ್ದೆ, ಕುಶಾಲ್, ಪಂಡಿತ, ಸಂತೋಷ್, ಅಮಿತ್ ಸೋಲಪುರ, ಆನಂದ, ಸಿದ್ದು ಗಾದಗಿ, ಮಲ್ಲು ಹನುಮಂತ, ತುಕಾರಾಮ ಚಿದ್ರಿ, ಸಂಗು ಚಿದ್ರಿ, ಧನರಾಜ ಕಟಗಿ, ಕಲ್ಲಪ್ಪ, ನರಸಪ್ಪ, ಕುಮಾರ್, ಲೋಕೇಶ್ ನಿಜಾಂಪುರ, ಫಯಿಮ್ ಪಟೇಲ್, ಲಕ್ಷ್ಮಣ್, ಅಶೋಕ್, ದತ್ತು ಚಿದ್ರಿ, ರಾಜು ಚಿದ್ರಿ, ರಮೇಶ ಮರ್ಜಾಪುರ ಮತ್ತಿತರರು ಇದ್ದರು.