ಅಂಧರ ಬಾಳಲ್ಲಿ ಬೆಳಕು ಮೂಡಿಸಿದ್ದ ಗವಾಯಿ

ಬೀದರ್‍ನ ಸಪ್ತಸ್ವರ ಕಲಾ ಸಂಸ್ಥೆಯ ಸಂಗೀತ ಪಾಠಶಾಲೆಯಲ್ಲಿ ನಡೆದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕುರಿತ ಚಿಂತನ ಗೋಷ್ಠಿಯಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.
ಬೀದರ್‍ನ ಸಪ್ತಸ್ವರ ಕಲಾ ಸಂಸ್ಥೆಯ ಸಂಗೀತ ಪಾಠಶಾಲೆಯಲ್ಲಿ ನಡೆದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕುರಿತ ಚಿಂತನ ಗೋಷ್ಠಿಯಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.
Published on

ಗವಾಯಿಗಳು ಅಸಂಖ್ಯಾತ ಅನಾಥ, ಬಡ ಹಾಗೂ ಅಂಧ ಮಕ್ಕಳಿಗೆ ಸಂಗೀತ ವಿದ್ಯೆ ಧಾರೆ ಎರೆದಿದ್ದರು ಎಂದು ಸ್ಮರಿಸಿದರು.

ಕಲಾವಿದರಾದ ಸಂಜುಕುಮಾರ ಸ್ವಾಮಿ ಉಜನಿ ಹಾಗೂ ಕಿರಣ ಸ್ವಾಮಿ ಹಿರೇಮಠ ಅವರು ಪುಟ್ಟರಾಜ ಗವಾಯಿಗಳ ಕುರಿತು ಹಾಡು ಹಾಡಿದರು. ತಬಲಾ ವಾದಕರಾದ ಪವನಕುಮಾರ ಡಪ್ಪೂರ, ಮಹೇಶ್ ಬಟ್ನಾಪುರೆ ಹಾಗೂ ವಿಜಯಕುಮಾರ ಗಾದಗಿ ತಬಲಾ ಸಾಥ್ ನೀಡಿದರು.

ಸಪ್ತಸ್ವರ ಕಲಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ನಾಗಮಾರಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಪಾಟೀಲ, ಕೃಷ್ಣ, ಅರ್ಜುನ, ಸಾಧು ಘಾಟ್ ಮಹಾರಾಜ ಪಾಠಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net