ಧರ್ಮ ರಕ್ಷಣೆಗೆ ಗುರುಗಳ ಕೊಡುಗೆ ಅಪಾರ

ಭಾಲ್ಕಿ ತಾಲ್ಲೂಕಿನ ಧನ್ನೂರ(ಎಚ್) ಗ್ರಾಮದಲ್ಲಿ ನಡೆದ ಗುರು ವಂದನೆ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಲೇಖಕಿ ಪ್ರಣಿತಾ ಪ್ರಕಾಶ್ ಕೋರೆ ರಚಿತ ಸಿದ್ಧ ಪುರುಷ ಶ್ರೀ ಸಿದ್ಧಯ್ಯಪ್ಪನವರು ಗ್ರಂಥ ಬಿಡುಗಡೆ ಮಾಡಲಾಯಿತು.
ಭಾಲ್ಕಿ ತಾಲ್ಲೂಕಿನ ಧನ್ನೂರ(ಎಚ್) ಗ್ರಾಮದಲ್ಲಿ ನಡೆದ ಗುರು ವಂದನೆ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಲೇಖಕಿ ಪ್ರಣಿತಾ ಪ್ರಕಾಶ್ ಕೋರೆ ರಚಿತ ಸಿದ್ಧ ಪುರುಷ ಶ್ರೀ ಸಿದ್ಧಯ್ಯಪ್ಪನವರು ಗ್ರಂಥ ಬಿಡುಗಡೆ ಮಾಡಲಾಯಿತು.
Published on
ಬೀದರ್: ಧರ್ಮ ರಕ್ಷಣೆಗೆ ಗುರುಗಳ ಕೊಡುಗೆ ಅಪಾರವಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.
ಭಾಲ್ಕಿ ತಾಲ್ಲೂಕಿನ ಧನ್ನೂರ(ಎಚ್) ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಗುರು ಪೂರ್ಣಿಮೆ ನಿಮಿತ್ತ ನಡೆದ ಗುರು ವಂದನೆ, ಅಭಿನಂದನೆ ಹಾಗೂ ಲೇಖಕಿ ಪ್ರಣಿತಾ ಪ್ರಕಾಶ್ ಕೋರೆ ರಚಿತ ಸಿದ್ಧ ಪುರುಷ ಶ್ರೀ ಸಿದ್ಧಯ್ಯಪ್ಪನವರು ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆದಿ ಕಾಲದಿಂದಲೂ ಪಂಚ ಪೀಠಗಳು ದೇಶದ ಉದ್ದಗಲಕ್ಕೂ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಪಂಚ ಪೀಠಾಧೀಶರು ದೇಶ ಹಾಗೂ ಸಮಾಜದ ಒಳಿತಿಗೆ ಸದಾ ದುಡಿಯುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಬೆಮಳಖೇಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ನಮ್ಮಲ್ಲಿ ಗುರುವಿಗೆ ಅತ್ಯುನ್ನತ ಗೌರವ ಇದೆ. ಹರ ಮುನಿದರೆ ಗುರು ಕಾಯುವನು ಎಂಬ ಗಾದೆ ಗುರುವಿನ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.
ಗುರುತ್ವ ಸ್ವಾರ್ಥಕ್ಕಾಗದೆ, ವಿಶ್ವ ಕಲ್ಯಾಣಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಪ್ರಣಿತಾ ಕೋರೆ ಅವರು ಗುರು ಪೂರ್ಣಿಮೆ ದಿನ ತಮ್ಮ ಪುಸ್ತಕ ಬಿಡುಗಡೆಗೊಳಿಸಿರುವುದು ಸ್ತುತ್ಯಾರ್ಹವಾಗಿದೆ. ಸಿದ್ಧ ಪುರುಷ ಶ್ರೀ ಸಿದ್ಧಯ್ಯಪ್ಪನವರು ಕೃತಿ ಸಿದ್ಧಯ್ಯಪ್ಪನವರ ಜೀವನ ಹಾಗೂ ಲೀಲೆಗಳನ್ನು ಒಳಗೊಂಡಿದೆ. ಓದುಗರನ್ನು ತನ್ನತ್ತ ಸೆಳೆಯಲಿದೆ ಎಂದು ತಿಳಿಸಿದರು.
ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಸದಸ್ಯ ರಾಜಶೇಖರ ನಾಗಮೂರ್ತಿ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಜಗನ್ನಾಥ ಪಾಟೀಲ ಮಾತನಾಡಿದರು. ಮಾತೆ ಕರುಣಾದೇವಿ ಸಾನಿಧ್ಯ ವಹಿಸಿದ್ದರು.
ಉದಗಿರದ ಉದ್ಯಮಿ ಡಿ.ವೈ. ಬಿರಾದಾರ, ಹುಮನಾಬಾದ್ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ವೀರಪ್ಪ ಮುದ್ದಾ, ಡಾ. ಓಂಕಾರ ಸ್ವಾಮಿ, ಡಾ. ಸುಭಾಷ್ ಪಾಟೀಲ, ಪಿಡಿಒ ಸಂತೋಷ್ ಮಡಿಕೆ, ಗ್ರಂಥದ ಲೇಖಕಿ ಪ್ರಣಿತಾ ಪ್ರಕಾಶ್ ಕೋರೆ, ಪ್ರಮುಖರಾದ ಮಹೇಶ ಪಾಟೀಲ, ಕಂಟೆಪ್ಪ ಭಂಗೂರೆ, ಗುಂಡೆರಾವ್ ಪಾಟೀಲ, ಶ್ರೀಕಾಂತ ದಾನಿ, ಗುರುನಾಥ ಬಿರಾದಾರ, ಪರಮೇಶ್ವರ್ ಪಾಟೀಲ, ಕವಿರಾಜ ಪಾಟೀಲ, ವರದಯ್ಯ ಸ್ವಾಮಿ, ಮಹೇಶ್ ಪಾಟೀಲ, ಶಾಂತಕುಮಾರ ಖಂಡ್ರೆ, ಅಮರ ಮೋದಿ, ಅನಿಲ್ ಪಾಟೀಲ, ಬಸವರಾಜ ಬಕ್ಕ, ಬಸವರಾಜ ಹಾಲಹಳ್ಳಿ, ಅನಂತ ಸ್ವಾಮಿ, ಶಿವಕುಮಾರ ಸ್ವಾಮಿ, ಸಂತೋಷ್ ಖಂಡ್ರೆ, ಮಲ್ಲಿಕಾರ್ಜುನ ಬಿರಾದಾರ, ಸೋಮನಾಥ ಪಾಟೀಲ, ಅಮರನಾಥ ಪಾಟೀಲ, ರವೀಂದ್ರ ಪಾಟೀಲ, ವಿಶ್ವನಾಥ ದಾನಿ, ಗಂಗಾಧರ ಸ್ವಾಮಿ, ರಮೇಶ ಅರಳೆ, ಸತೀಶ್ ಹಾಳೆ, ಉಮಾಕಾಂತ ಜಮಶೆಟ್ಟಿ, ಕವಿರಾಜ ಹಾಳೆ, ರಮೇಶ್ ಪೊಲೀಸ್ ಪಾಟೀಲ, ಜ್ಯೋತಿರ್ಲಿಂಗ ಸ್ವಾಮಿ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಸಾರೋಟಿನಲ್ಲಿ ಮಾತೆ ಕರುಣಾದೇವಿ ಹಾಗೂ ಡಾ. ರಾಜಶೇಖರ ಶಿವಾಚಾರ್ಯರ ವೈಭವದ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು. 1,008 ಮಹಿಳೆಯರು ಸ್ವಾಗತಿಸಿ ಬರಮಾಡಿಕೊಂಡರು. ಮಳೆಯನ್ನೂ ಲೆಕ್ಕಿಸದೆ ವಿವಿಧೆಡೆಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net