ಮಹಿಳಾ ಸಬಲೀಕರಣಕ್ಕಾಗಿ ಯೋಜನೆ

ಬೀದರ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಜಿಲ್ಲಾ ೩೧೬ರ ೪೨ನೇ ಜಿಲ್ಲಾಧ್ಯಕ್ಷೆಯಾಗಿ ಮಂಜುಳಾ ಮೂಲಗೆ ಪಗ್ರಹಣ ಮಾಡಿದರು. ವೀನುತಾ ಹರೀಶ್, ಮೀನಾ ಸೇನನ್ ಇದ್ದರು.
ಬೀದರ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಜಿಲ್ಲಾ ೩೧೬ರ ೪೨ನೇ ಜಿಲ್ಲಾಧ್ಯಕ್ಷೆಯಾಗಿ ಮಂಜುಳಾ ಮೂಲಗೆ ಪಗ್ರಹಣ ಮಾಡಿದರು. ವೀನುತಾ ಹರೀಶ್, ಮೀನಾ ಸೇನನ್ ಇದ್ದರು.
Published on
ಬೀದರ್: ಮಹಿಳಾ ಸಮುದಾಯದ ಸಬಲೀಕರಣಕ್ಕಾಗಿ ನಾನಾ ಕಾರ್ಯ ಯೋಜನೆಗಳು ಹಾಕಿಕೊಳ್ಳಲಾಗಿದೆ ಎಂದು ಇನ್ನರ್ ವೀಲ್ ಜಿಲ್ಲಾ ೩೧೬ರ ೪೨ನೇ ಜಿಲ್ಲಾ ಅಸೆಂಬ್ಲಿಯ ನೂತನ ಅಧ್ಯಕ್ಷೆ ಮಂಜುಳಾ ಮೂಲಗೆ ಹೇಳಿದರು.
ಇಲ್ಲಿನ ಪ್ರತಾಪನಗರದಲ್ಲಿರುವ ವಿಆರ್‌ಸಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ ಇನ್ನರ್ ವೀಲ್ ಜಿಲ್ಲಾ ೩೧೬ರ ೪೨ನೇ ಜಿಲ್ಲಾ ಅಸೆಂಬ್ಲಿಯ ೨೦೨೬-೨೭ನೇ ಸಾಲಿನ ಜಿಲ್ಲಾ ಅಧ್ಯಕ್ಷೆ ಮತ್ತು ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇನ್ನರ್ ವೀಲ್ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಇನ್ನರ್ ವೀಲ್‌ನ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಒಗ್ಗೂಡಿ ಕಾರ್ಯ ಚಟುವಟಿಕೆಗಳನ್ನು ಮಾಡಲಾಗುವುದು ಎಂದು ಹೇಳಿದರು.
ಇನರ್ ವೀಲ್ ಅಸೋಸಿಯೇಷನ್ ಅಧ್ಯಕ್ಷೆ ವೀನುತಾ ಹರೀಶ್ ಮಾತನಾಡಿ, ವಿಶೇಷ ಎಂದರೆ ಬೀದರ್ ಜಿಲ್ಲೆಯ ಇನ್ನರ್ ವೀಲ್ ಇತಿಹಾಸದಲ್ಲಿ ಸುಮಾರು ೪೦ ವರ್ಷ ನಂತರ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಮಂಜುಳಾ ಮೂಲಗೆ ಪಾತ್ರರಾಗಿದ್ದಾರೆ. ಈ ಮೊದಲು ಗುರಮ್ಮ ಸಿದ್ದಾರಡ್ಡಿ ಅವರು ಸೇವೆ ಸಲ್ಲಿಸಿದ್ದರು. ನೂತನ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಸಂಸ್ಥೆಗೆ ಹೆಸರು ತರಬೇಕು ಎಂದು ಹೇಳಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ (ಹೊಸಪೇಟೆ), ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜತೆಗೆ ಆಂಧ್ರಪ್ರದೇಶದ ಅನಂತಪುರ, ಕರ್ನೂಲ್, ನಂದ್ಯಾಲ, ಪೊಟ್ಟಿ ಶ್ರೀರಾಮುಲು ನೆಲ್ಲೂರು, ವೈಎಸ್‌ಆರ್ ಕಡಪಾ, ಶ್ರೀ ಸತ್ಯಸಾಯಿ ಜಿಲ್ಲೆಗಳ ವಿವಿಧ ಇನ್ನರ್ ವೀಲ್ ಕ್ಲಬ್‌ಗಳ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಭೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
೪೨ನೇ ಜಿಲ್ಲಾ ಅಸೆಂಬ್ಲಿ ಅಧ್ಯಕ್ಷೆ ಮೀನಾ ಸೇನನ್, ಸಹ ಅಧ್ಯಕ್ಷೆ ಪ್ರೇಮಿಲಾ ಗುತ್ತಿ, ವೇದಾ ಸಿಂದೋಲ, ಶೀಲಾ ಮಾಳಗೆ, ಸುನೈನಾ ಗುತ್ತಿ ಇತರರಿದ್ದರು.
ನೂತನ ಪದಾಧಿಕಾರಿಗಳ ಪಟ್ಟಿ
ಇನ್ನರ್ ವೀಲ್ ಜಿಲ್ಲಾ ೩೧೬ರ ೪೨ನೇ ಜಿಲ್ಲಾ ಅಸೆಂಬ್ಲಿಯ ೨೦೨೬-೨೭ನೇ ಸಾಲಿನ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಇಂತಿದೆ. ಮಂಜುಳಾ ಮೂಲಗೆ (ಅಧ್ಯಕ್ಷೆ), ಡಾ.ಶೋಭಾ ಗೌಡರ್ (ಉಪಾಧ್ಯಕ್ಷೆ), ಜಯಶ್ರೀ ಸಾಗರ್ (ಅಸೋಸಿಯೇಷನ್ ಕೌನ್ಸಿಲ್ ಸದಸ್ಯೆ), ಡಾ.ಪಾರ್ವತಿ ಪಲೋಟಿ (ಕಾರ್ಯದರ್ಶಿ), ಶ್ವೇತಾರೆಡ್ಡಿ (ಖಜಾಂಚಿ), ಡಾ.ಜ್ಯೋತಿ ತೆಗನೂರು (ವಿಸ್ತಿರ್ಣಾ ಸೇವಾ ಸಂಘಟಕಿ), ಎಸ್.ವಿ. ರಮ್ಯಾ (ಸಂಪಾದಕಿ) ಹಾಗೂ ಡಾ. ಶೋಭಾ ಧನಂಜಯ (ಅಂತಾರಾಷ್ಟೀಯ ಸೇವಾ ಸಂಘಟಕಿ) ಅವರು ಪದಗ್ರಹಣ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net