ರೋಟರಿ ಸಿಲ್ವರ್ ಸ್ಟಾರ್ ನಿಂದ ಐಸಿಯು ಆಂಬುಲೆನ್ಸ್ ಸೇವೆ

ಬೀದರ್‍ನ ವೈಬ್ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಅಧ್ಯಕ್ಷೆಯಾಗಿ ಸ್ಫೂರ್ತಿ ಬಸವರಾಜ ಧನ್ನೂರ ಪದಗ್ರಹಣ ಮಾಡಿದರು.
ಬೀದರ್‍ನ ವೈಬ್ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಅಧ್ಯಕ್ಷೆಯಾಗಿ ಸ್ಫೂರ್ತಿ ಬಸವರಾಜ ಧನ್ನೂರ ಪದಗ್ರಹಣ ಮಾಡಿದರು.
Published on
ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ವರ್ಷದ ಒಳಗೆ ತೀವ್ರ ನಿಗಾ ಘಟಕ (ಐಸಿಯು) ಆಂಬುಲನ್ಸ್ ಸೇವೆ ಆರಂಭಿಸಲು ಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಸ್ಫೂರ್ತಿ ಬಸವರಾಜ ಧನ್ನೂರ ಹೇಳಿದರು.
ನಗರದ ವೈಬ್ ಹೋಟೆಲ್‍ನಲ್ಲಿ ನಡೆದ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್‍ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಐಸಿಯು ಆಂಬುಲನ್ಸ್ ಇಲ್ಲ. ಇದು, ಆ ಕೊರತೆಯನ್ನು ನೀಗಿಸಲಿದೆ. ಜಿಲ್ಲೆಯಾದ್ಯಂತ ಸೇವೆ ಒದಗಿಸಲಿರುವ ಕಾರಣ ಅತಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಪ್ರಾಣ ಉಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಘೋಷವಾಕ್ಯದೊಂದಿಗೆ ಈ ವರ್ಷವೂ ಕ್ರಿಕೆಟ್ ಟೂರ್ನಿ ಸಂಘಟಿಸಿ, ದೇಣಿಗೆ ಸಂಗ್ರಹಿಸಿ, ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಪೂರಕವಾದ ಚಟುವಟಿಕೆಗಳಿಗೆ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಕೆಲ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಅವುಗಳನ್ನು ಹ್ಯಾಪಿ ಸ್ಕೂಲ್‍ಗಳಾಗಿ ಪರಿವರ್ತಿಸಲಾಗುವುದು. ಇನ್ನೂ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಬಹುತೇಕರು ವೈಯಕ್ತಿಕ ಬದುಕಿಗಾಗಿ ಮ್ಯಾರಥಾನ್‍ನಲ್ಲಿ ಓಡಿದಂತೆ, ಓಡುತ್ತಿದ್ದಾರೆ. ವೈಯಕ್ತಿಕ ಬದುಕಿನತ್ತಲೇ ಗಮನ ಕೇಂದ್ರೀಕರಿಸಿದ್ದಾರೆ. ಆದರೆ, ರೋಟರಿ ಕ್ಲಬ್ ಸದಸ್ಯರು ವೈಯಕ್ತಿಕ ಬದುಕಿನ ಜತೆಗೆ ಸಮಾಜಕ್ಕೂ ಕೊಡುಗೆ ನೀಡುತ್ತಿದ್ದಾರೆ. ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.
ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿ ಹೊಂದಿದೆ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ ಎಂದು ತಿಳಿಸಿದರು.
ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಕಿರಣ್ ಶೈಲೇಂದ್ರ ಬೆಲ್ದಾಳೆ ಹಾಗೂ ಪ್ರಶಾಂತ್ ಲಂಜವಾಡೆ ಕ್ಲಬ್ ಸದಸ್ಯತ್ವ ಪಡೆದರು.
ಇದೇ ಸಂದರ್ಭದಲ್ಲಿ ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್‍ಗೆ ಚಾಲನೆ ನೀಡಲಾಯಿತು. ತಂಡಗಳ ಮಾಲೀಕರ ಹೆಸರು ಘೋಷಣೆ ಮಾಡಲಾಯಿತು.
ರೋಟರಿ ಗುರು ಎಂದೇ ಹೆಸರಾದ ಪಿಡಿಜಿ ರವಿ ವದ್ಲಮಾನಿ, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಕೇಶವ ರೆಡ್ಡಿ, ಜಿಲ್ಲಾ ಡಿ.ಇ.ಐ. ಚೇರ್‍ಮನ್ ಬಸವರಾಜ ಧನ್ನೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಮೂಲಗೆ, ಸಹಾಯಕ ಗವರ್ನರ್ ನಿತಿನ್ ಕರ್ಪೂರ, ನಿಕಟಪೂರ್ವ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ, ಇನ್ನರ್ ವ್ಹೀಲ್ ಜಿಲ್ಲೆ 316 ಜಿಲ್ಲಾ ಚೇರ್‍ಮೆನ್ ಮಂಜುಳಾ ಮೂಲಗೆ, ಶ್ವೇತಾ ರೆಡ್ಡಿ, ಸುವರ್ಣಾ ಧನ್ನೂರ, ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಉಪಾಧ್ಯಕ್ಷ ಮಂಜುನಾಥ ಹೂಗಾರ್, ಕಾರ್ಯದರ್ಶಿ ಅಭಿಷೇಕ ಚಿಂತಾಮಣಿ, ಜಂಟಿ ಕಾರ್ಯದರ್ಶಿ ಕೀರ್ತಿ ವಾಲೆ, ಖಜಾಂಚಿ ನೆಹಾಲ್ ಸಿಂಗ್, ಜಂಟಿ ಖಜಾಂಚಿ ಅಮಯ್ ಸಿಂದೋಲ್, ನಿಕಟಪೂರ್ವ ಅಧ್ಯಕ್ಷ ಆದೀಶ್ ಆರ್. ವಾಲಿ, ಸದಸ್ಯರಾದ ಪುನೀತ್ ಸಿಂಗ್, ಪೂಜಾ ಜಾರ್ಜ್ ಸ್ಯಾಮುಯೇಲ್, ಕಿರಣ್ ಸ್ಯಾಮುಯೇಲ್, ಡಾ. ಸಂಗಮೇಶ ವಡಗಾವೆ, ಸಹನಾ ಪಾಟೀಲ, ಸಚಿನ್ ಕೊಳ್ಳೂರ, ಆನಂದ ಕೊಟರಕಿ, ಡಾ. ಸಚಿನ್ ಚುದಗೆ, ಬಸವಕುಮಾರ ಸುಲಗುಂಟೆ, ಮಹೇಶ ಚಿಮಕೋಡೆ, ಆನಂದ ಕುಲಕರ್ಣಿ, ಸಾಯಿನಾಥ್ ಜಿ. ಬಿರಾದಾರ, ನಿಖಿಲ್ ಗಂಗಶೆಟ್ಟಿ, ಗುರು ಸಿಂದೋಲ್ ಮತ್ತಿತರರು ಇದ್ದರು. ಬೀದರ್‍ನ ಗಣ್ಯರು, ಎಲ್ಲ ರೋಟರಿ ಕ್ಲಬ್‍ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net