ಮಳೆಗಾಗಿ ಪ್ರಾರ್ಥಿಸಿ ಪಾದಯಾತ್ರೆ

ಮಳೆಗಾಗಿ ಪ್ರಾರ್ಥಿಸಿ ಬೀದರ್ ತಾಲೂಕಿನ ರಾಜಗೀರಾ ಯುವಕರು ಪಾದಯಾತ್ರೆ ನಡೆಸಿದರು.
ಮಳೆಗಾಗಿ ಪ್ರಾರ್ಥಿಸಿ ಬೀದರ್ ತಾಲೂಕಿನ ರಾಜಗೀರಾ ಯುವಕರು ಪಾದಯಾತ್ರೆ ನಡೆಸಿದರು.
Published on
ಬೀದರ: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ರಾಜಗೀರಾ ಗ್ರಾಮದ ಯುವಕರ ತಂಡವು ದಕ್ಷಿಣ ಮುಖಿ ಹನುಮಾನ ದೇವಸ್ಥಾನಗಳಿಗೆ ಭಾನುವಾರ ಪಾದಯಾತ್ರೆ ನಡೆಸಿದರು.
ಪಾದಯಾತ್ರೆಯಲ್ಲಿ ಹೊಕ್ರಾಣಾ (ಕೆ), ಹೊಕ್ರಾಣಾ (ಬಿ), ಧರ್ಮಾಪುರ, ಚಿಂತಲಗೇರಾ, ಬರೂರ, ಗೌಸಪುರ, ಮನ್ನಳ್ಳಿ, ಯಾಕತಪುರ, ತಡಪಳ್ಳಿ ಗ್ರಾಮದ ಹನುಮಾನ ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮಳೆಯ ಕೊರತೆಯಿಂದ ಸೋಯಾ, ತೊಗರಿ, ಉದ್ದು, ಹೆಸರು ಸೇರಿದಂತೆ ಇತರ ಬೆಳೆಗಳು ಒಣಗುತ್ತಿವೆ. ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ದೇವರನ್ನು ಪ್ರಾರ್ಥಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಮುಖಂಡ ಆಕಾಶ ಅಡ್ಡೆ ತಿಳಿಸಿದ್ದಾರೆ.
ಪ್ರಮುಖರಾದ ಬಕ್ಕಣ್ಣ ದೇಗುಲ್ಮಡಿ, ಬಸವರಾಜ, ಸಂತೋಷ ಶೇರಿಕಾರ, ಸುನೀಲ ಶೇರಿಕಾರ, ಶಿವರಾಜ ಸ್ವಾಮಿ, ರಾಜಕುಮಾರ ಶೇರಿಕಾರ, ತುಕಾರಾಮ ಯರನಳ್ಳೆ, ಶ್ರೀನಿವಾಸ ಭುತ್ತಾಳೆ, ನಾಗಶೆಟ್ಟಿ ವಗ್ಗೆರ್, ಯಲ್ಲಾಲಿಂಗ, ಬಕ್ಕಪ್ಪ, ರೇವಣಪ್ಪ, ನರಸಪ್ಪ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net