ಎಸ್ಐಆರ್. ಉಸ್ತುವಾರಿಯಾಗಿ ತಾಳಂಪಳ್ಳಿ

ಧನರಾಜ ತಾಳಂಪಳ್ಳಿ
ಧನರಾಜ ತಾಳಂಪಳ್ಳಿ
Published on
ಬೀದರ್: ಕಾಂಗ್ರೆಸ್ ಪಕ್ಷವು ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಮತದಾರರ ಪಟ್ಟಿ ವಿಶೇಷ
ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯ ಉಸ್ತುವಾರಿಯಾಗಿ ಜಿಲ್ಲೆಯವರೇ ಆದ
ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ ಅವರನ್ನು ನೇಮಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬೂತ್ ಮಟ್ಟದಲ್ಲಿ ಚುನಾವಣಾ ಅಧಿಕಾರಿಗಳು ಸರಿಯಾದ ಕ್ರಮದಲ್ಲಿ ಎಸ್‍ಐಆರ್
ಅನುಷ್ಠಾನಗೊಳಿಸುವುದನ್ನು ಸೂಕ್ಷ್ಮವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ತಾಳಂಪಳ್ಳಿ
ಅವರಿಗೆ ವಹಿಸಲಾಗಿದೆ.
ಸಂಬಂಧಪಟ್ಟ ಜಿಲ್ಲೆಗಳಲ್ಲಿ ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ
ಪದಾಧಿಕಾರಿಗಳನ್ನು ಎಸ್‍ಐಆರ್ ಕಾರ್ಯಕ್ಕೆ ನಿಯೋಜಿಸಿ, ಪಕ್ಷದಿಂದ ನೇಮಕಗೊಂಡ
ಬೂತ್‍ಮಟ್ಟದ ಏಜೆಂಟರ (ಬಿಎಲ್‍ಎ2) ಸಹಕಾರ ಪಡೆದು, ಚುನಾವಣಾ ಆಯೋಗದಿಂದ ನೇಮಕಗೊಂಡ
ಬಿಎಲ್‍ಒಗಳ ಸಂಪರ್ಕದೊಂದಿಗೆ ಪ್ರತಿ ಮನೆಗೆ ಭೇಟಿ ನೀಡಿ, ಎಸ್.ಐ.ಆರ್. ಪ್ರಕ್ರಿಯೆ
ಪಾರದರ್ಶಕವಾಗಿ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net