ಉಚಿತ ವಿಶೇಷ ಕಾರ್ಯಾಗಾರ 26ಕ್ಕೆ

ಡಾ.ವಿಜಯಕುಮಾರ ಎಂ.ವಿ.
ಡಾ.ವಿಜಯಕುಮಾರ ಎಂ.ವಿ.
Published on
ಬೀದರ್: ವಿನ್ನರ್ ಹಾಗೂ ಸ್ಪರ್ಧಾ ಜಿನಿಯಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ನಗರದ ತಾಯಿ-ಮಗು ವೃತ್ತ ಸಮೀಪದ ನರ್ಚರ್ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದಲ್ಲಿ ಜುಲೈ 26 ರಂದು ಎಚ್.ಎಸ್.ಟಿ.ಆರ್, ಜಿ.ಪಿ.ಎಸ್.ಟಿ.ಆರ್, ಪಿ.ಎಸ್.ಟಿ.ಆರ್, ಕ್ರೈಸ್ ಶಿಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತು ಉಚಿತ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರ ವರೆಗೆ ನಡೆಯಲಿರುವ ಕಾರ್ಯಾಗಾರದಲ್ಲಿ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಡಾ. ವಿಜಯಕುಮಾರ ಎಂ.ವಿ. (ಮಗುವಿನ ಮನೋವಿಜ್ಞಾನ ಹಾಗೂ ಇಂಗ್ಲೀಷ್), ಬಸವರಾಜ ಜನಕಟ್ಟಿ (ಬೌದ್ಧಿಕ ಸಾಮಥ್ರ್ಯ ಮತ್ತು ಗಣಿತ) ಹಾಗೂ ಸಂಜಯ್ ಪಾಟೀಲ (ಅರ್ಥಶಾಸ್ತ್ರ) ಮಾರ್ಗದರ್ಶನ ಮಾಡಲಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲಿರುವ ಜಿಲ್ಲೆಯ ಅಭ್ಯರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು ಎಂದು ಕೇಂದ್ರದ ನಿರ್ದೇಶಕಿ ಪೂಜಾ ಎಚ್. ಪಾಟೀಲ ಹಾಗೂ ಮಹಾದೇವಿ ಎಂ. ಬುಕ್ಕಾ ಕೋರಿದ್ದಾರೆ.
ಕಾರ್ಯಾಗಾರದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 8970850873 ಅಥವಾ 9902580095 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net