ಅನಧಿಕೃತ ಕೋಚಿಂಗ್ ಸೆಂಟರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ

ಬೀದರ್‍ನಲ್ಲಿ ನಮ್ಮ ಕರ್ನಾಟಕ ಸೇನೆಯ ನೂತನ ಪದಾಧಿಕಾರಿಗಳಿಗೆ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಪಾಟೀಲ ಜ್ಯಾಂತಿ ಅವರು ನೇಮಕಾತಿ ಪತ್ರ ವಿತರಿಸಿದರು.
ಬೀದರ್‍ನಲ್ಲಿ ನಮ್ಮ ಕರ್ನಾಟಕ ಸೇನೆಯ ನೂತನ ಪದಾಧಿಕಾರಿಗಳಿಗೆ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಪಾಟೀಲ ಜ್ಯಾಂತಿ ಅವರು ನೇಮಕಾತಿ ಪತ್ರ ವಿತರಿಸಿದರು.
Published on
ಬೀದರ್: ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್‍ಗಳ ವಿರುದ್ಧ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಪಾಟೀಲ ಜ್ಯಾಂತಿ ಎಚ್ಚರಿಸಿದರು.
ನಗರದ ಸೇನೆಯ ಜಿಲ್ಲಾ ಘಟಕದ ಕಚೇರಿಯಲ್ಲಿ ಶುಕ್ರವಾರ ಸೇನೆಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಅನೇಕರು ಸರ್ಕಾರದ ಪರವಾನಗಿ ಇಲ್ಲದೆಯೇ ರಾಜಾರೋಷವಾಗಿ ಕೋಚಿಂಗ್ ಸೆಂಟರ್‍ಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲ ಸರ್ಕಾರಿ ಶಾಲೆ ಶಿಕ್ಷಕರು ಕೋಚಿಂಗ್ ಸೆಂಟರ್ ಮುನ್ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಅನಧಿಕೃತ ವಸತಿ ಶಾಲೆಗಳನ್ನು ನಡೆಸುತ್ತಿವೆ ಎಂದು ಆಪಾದಿಸಿದರು.
ವಿಷಯ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ನೂತನ ಪದಾಧಿಕಾರಿಗಳು: ಸೇನೆಯ ನೂತನ ಪದಾಧಿಕಾರಿಗಳ ವಿವರ ಹೀಗಿದೆ.
ಜಿಲ್ಲಾ ಘಟಕ: ಶಿವರುದ್ರ ತೀರ್ಥ ಸ್ವಾಮಿ (ಉಪಾಧ್ಯಕ್ಷ), ಮಹಾರುದ್ರ ಅಮದಲಪಡ್ (ಸಂಘಟನಾ ಕಾರ್ಯದರ್ಶಿ).
ಬೀದರ್ ಉತ್ತರ ಘಟಕ: ಸಂಜು ಪಾಟೀಲ (ಗೌರವಾಧ್ಯಕ್ಷ), ಅನಿಲ್ (ಅಧ್ಯಕ್ಷ), ರವಿ ಪಾಟೀಲ, ಅನಿಲ್ ರೆಡ್ಡಿ (ಪ್ರಧಾನ ಕಾರ್ಯದರ್ಶಿ).
ಯುವ ಘಟಕ: ಸುಮಂತ್ ನಾಗೊರೆ(ಅಧ್ಯಕ್ಷ).
ಸಾಮಾಜಿಕ ಜಾಲತಾಣ ವಿಭಾಗ: ಸಂಗಮೇಶ ಬಿರಾದಾರ, ರಾಜು ತಳಘಟ್, ವಿಠ್ಠಲ ಬಿರಾದಾರ, ಅರ್ಜುನ ಪಾಟೀಲ (ಸಂಘಟನಾ ಕಾರ್ಯದರ್ಶಿ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net