ಬೀದರ್: ರೋಟರಿ ಕಲ್ಯಾಣ ಝೋನ್ ನೂತನ ಸಹಾಯಕ ಗವರ್ನರ್ ಆಗಿ ಇಲ್ಲಿಯ ನಿತಿನ್ ಕರ್ಪೂರ ನೇಮಕಗೊಂಡಿದ್ದಾರೆ.
ನೆರೆಯ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಅವರು ಪದಗ್ರಹಣ ಮಾಡಿದರು.
ನಿತಿನ್ ಅವರ ಅಧಿಕಾರ ಅವಧಿ 2027ರ ಜೂನ್ 30 ರ ವರೆಗೆ (ಒಂದು ವರ್ಷ) ಇದೆ.
ನಿತಿನ್ ಅವರು 12 ವರ್ಷಗಳಿಂದ ರೋಟರಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಎರಡು ಅವಧಿಗೆ ರೋಟರಿ ಕಲ್ಯಾಣ್ ಝೋನ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ರೋಟರಿ ಕಲ್ಯಾಣ ಝೋನ್ ವ್ಯಾಪ್ತಿಯಲ್ಲಿ 8 ಕ್ಲಬ್‍ಗಳು, 2 ಇ ಕ್ಲಬ್, 2 ರೋಟರ್ಯಾಕ್ಟ್ ಕ್ಲಬ್ ಹಾಗೂ 1 ಇಂಟರ್ಯಾಕ್ಟ್ ಕ್ಲಬ್‍ಗಳು ಇವೆ. ಈ ಕ್ಲಬ್ ಗಳಲ್ಲಿ 450 ಸದಸ್ಯರು ಇದ್ದಾರೆ.
ನಿತಿನ್ ಕರ್ಪೂರ ಅವರು ಸಹಾಯಕ ಗವರ್ನರ್ ಆಗಿ ನೇಮಕಗೊಂಡಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.