ಬೊಮ್ಮಗೊಂಡೇಶ್ವರರ ಆದರ್ಶ ಯುವಕರಿಗೆ ಸ್ಫೂರ್ತಿ

ಬೀದರ್ನಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೀಮಶಾ ಬಸಲಾಪುರ ಮಾತನಾಡಿದರು. ಸಂಗಪ್ಪ ತೌಡಿ, ನಾಗರಾಜ ನಂದಗಾಂವ, ಸಂತೋಷಕುಮಾರ ಜೋಳದಾಪಕೆ, ಬಸವರಾಜ ನಂದಗಾಂವ, ಭೀಮಸಿಂಗ್ ಮಲ್ಕಾಪುರೆ, ಸುರೇಶ ಹುಗೇರಿ ಇತರರಿದ್ದರು.
ಬೀದರ್ನಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೀಮಶಾ ಬಸಲಾಪುರ ಮಾತನಾಡಿದರು. ಸಂಗಪ್ಪ ತೌಡಿ, ನಾಗರಾಜ ನಂದಗಾಂವ, ಸಂತೋಷಕುಮಾರ ಜೋಳದಾಪಕೆ, ಬಸವರಾಜ ನಂದಗಾಂವ, ಭೀಮಸಿಂಗ್ ಮಲ್ಕಾಪುರೆ, ಸುರೇಶ ಹುಗೇರಿ ಇತರರಿದ್ದರು.
Published on
ಬೀದರ್: ಮಹಾತ್ಮ ಬೊಮ್ಮಗೊಂಡೇಶ್ವರ ಅವರ ತತ್ವಾದರ್ಶಗಳು ಯುವ ಸಮೂಹಕ್ಕೆ ಸ್ಫೂರ್ತಿ ಎಂದು ಗ್ರೇಡ್-1 ಅನುದಾನಿತ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಭೀಮಶಾ ಬಸಲಾಪುರ ಹೇಳಿದರು.
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಗಾಂಧಿಗಂಜ್ನ ಕನಕ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಬೊಮ್ಮಗೊಂಡೇಶ್ವರರ ಕುರಿತು ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೊಮ್ಮಗೊಂಡೇಶ್ವರರು 14 ಮತ್ತು 15ನೇ ಶತಮಾನದಲ್ಲಿ ಜನ್ಮ ತಾಳಿದ ಸಂತರೆಂದು ತಿಳಿಯಲಾಗಿದ್ದು, ಮೈಲಾರ ಮಲ್ಲಣ್ಣ ಅವರು ಮನೆದೇವರಾಗಿದ್ದರು. ಅಂದಿನ ಬಹಮನಿ ಸುಲ್ತಾನರಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.
ಬೊಮ್ಮಗೊಂಡೇಶ್ವರರ ಕಾಯಕನಿಷ್ಠೆ, ಶ್ರದ್ಧೆ ಮತ್ತು ಭಕ್ತಿಯನ್ನು ಕಂಡು ಅಂದಿನ ರಾಜರು ನಿನಗೆ ಏನು ಬೇಕು? ಎಂದು ಕೇಳಿದಾಗ, ನನಗೆ ಏನೂ ಬೇಡ. ನನ್ನ ಸಮಾಜದ ಬಂಧುಗಳಿಗೆ ಕುರಿ ಕಾಯಲು ಅರಣ್ಯದಲ್ಲಿ ಗೋಮಾಳ ಮೀಸಲಿಡಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಾಕು ಎಂದು ವಿನಂತಿಸಿಕೊಂಡಿದ್ದರು. ಇದು ಅವರ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಸಂಗಪ್ಪ ತೌಡಿ, ಬೊಮ್ಮಗೊಂಡೇಶ್ವರರು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರೂ ಧೈರ್ಯ ಕಳೆದುಕೊಳ್ಳದೆ ಕಾಯಕದಲ್ಲಿ ದೇವರನ್ನು ಕಂಡರು. ಸಮಾಜದ ಒಳಿತನ್ನೇ ಬಯಸಿದ ಅವರ ಆದರ್ಶ ಜೀವನ ಇಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದು ಹೇಳಿದರು.
ಹಾಲುಮತ ಸಮಾಜದಲ್ಲಿ ಅನೇಕ ಮಹಾತ್ಮರು, ಸಂತರು ಹಾಗೂ ಶರಣರು ಜನ್ಮ ತಾಳಿ ಸಮಾಜಕ್ಕೆ ಆದರ್ಶ ಜೀವನದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಅವರ ತತ್ವ-ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವ ಜನತೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕನಕ ಭವನದ ಅಧ್ಯಕ್ಷ ನಾಗರಾಜ ನಂದಗಾಂವ ಅಧ್ಯಕ್ಷತೆ ವಹಿಸಿದ್ದರು. ಕರವೇ ಜಿಲ್ಲಾ ಸಂಚಾಲಕ ಬಸವರಾಜ ನಂದಗಾಂವ, ಪ್ರಮುಖರಾದ ದೀಪಕ್ ಚಿದ್ರಿ, ಭೀಮಸಿಂಗ್ ಮಲ್ಕಾಪುರೆ, ಸುರೇಶ ಹುಗೇರಿ, ರಮೇಶ ಮೇತ್ರೆ ಮಾತನಾಡಿದರು.
ಕಲ್ಲಪ್ಪ ರಾಯಗೊಂಡ, ಸುನೀಲ ಚಿಲ್ಲರ್ಗಿ, ಮುರಳಿನಾಥ ಮೇತ್ರೆ, ಪಂಢರಿ ಜಮಾದಾರ, ತುಕಾರಾಮ ನೀಲಮ್ಮನಳ್ಳಿ, ಅಶೋಕ ನೆಮತಾಬಾದ್, ಆನಂದ ಎಖೇಳ್ಳಿಕರ್, ಕಲ್ಲಪ್ಪ ಶಾಪುರ, ಶಿವಶಂಕರ ನೀಲಮ್ಮನಳ್ಳಿ, ಆತ್ಮಾನಂದ ಬೊಂಬುಳಗಿ ಇತರರಿದ್ದರು. ಜಿಲ್ಲಾ ಗೊಂಡ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ್ ಬ್ಯಾಲಹಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜಿನ ಮುರ್ಕಿ ನಿರೂಪಣೆ ಮಾಡಿದರು. ಸಿದ್ದು ಬಾವಗಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೇವಣಪ್ಪ ಮೂಲಗೆ, ಮಲ್ಲಿಕಾರ್ಜುನ ಮಲ್ಕಾಪುರೆ, ಮನೋಹರ ಹುಪಳಾ, ಮಲ್ಲಿಕಾರ್ಜುನ ಪಾಟೀಲ್ ಹಾಗೂ ಕೃಷ್ಣರಾಜ ಅವರು ಜಾನಪದ ಮತ್ತು ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net