ಸಮಾಜಸೇವಾ ಚಟವಟಿಕೆಗೆ ಜಮೀನು ಮಂಜೂರು ಮಾಡಿ

ಸಾಮಾಜಿಕ ಕಾರ್ಯಕ್ಕಾಗಿ ಸರಕಾರದ ಭೂಮಿ ಮಂಜುರು ಮಾಡುವಂತೆ ಶ್ರೀ ಮಾಣಿಕಪ್ರಭು ವಾಯು ವಿಹಾರ ಸೇವಾ ಸಂಘದ ಅಧ್ಯಕ್ಷ ಸುರೇಶ ಸೀಗಿ ನೇತೃತ್ವದ ನಿಯೋಗ ಹುಮನಾಬಾದ್​ ತಹಸೀಲ್ದಾರ ಜಗನ್ನಾಥ ಚೌರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ವೈಜಿನಾಥ ಪಾಟೀಲ್​, ಶ್ರೀನಾಥ ದೇವಣಿ, ಭೀಮೇಶ ಪಂಚಾಳ, ಶ್ರೀಕಾಂತ ಕುಲಕರ್ಣಿ, ಮಲ್ಲಿಕಾರ್ಜುನ ರೋಗನ ಇತರರಿದ್ದರು.

Published on: 

ಹುಮನಾಬಾದ್​: ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರದ ಭೂಮಿ ಮಂಜೂರು ಮಾಡುವಂತೆ ಸ್ಥಳಿಯ ಶ್ರೀ ಮಾಣಿಕಪ್ರಭು ವಾಯು ವಿಹಾರ ಸೇವಾ ಸಂಘ ಒತ್ತಾಯಿಸಿದೆ.

ಪಟ್ಟಣದ ತಹಸಿಲ್​ ಕಚೇರಿಯಲ್ಲಿ ಬುಧವಾರ ಸಂಘದ ಅಧ್ಯಕ್ಷ ಸುರೇಶ ಸೀಗಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್​ ಜಗನ್ನಾಥ ಚೌರ ಅವರಿಗೆ ಸಲ್ಲಿಸಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಮಹಿಳೆಯರಿಗೆ ಹೊಲಿಗೆ ತರಬೇತಿ, ಕ್ರೀಡಾ ಚಟವಟಿಕೆ ಹಾಗೂ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ತಾಲೂಕಿನಲ್ಲಿ 5 ಎಕರೆ ಸರ್ಕಾರಿ ಅಥವಾ ಗೋಮಾಳ ಜಮೀನು ಮಂಜೂರು ಮಾಡಿಕೊಡುವಂತೆ ಕೋರಿದ್ದಾರೆ.

ಸಂಘದ ಉಪಾಧ್ಯಕ್ಷ ವೈಜಿನಾಥ ಪಾಟೀಲ್​, ಪ್ರಧಾನ ಕಾರ್ಯದರ್ಶಿ ಶ್ರೀನಾಥ ದೇವಣಿ, ಪ್ರಮುಖರಾದ ಭೀಮೇಶ ಪಂಚಾಳ, ಶ್ರೀಕಾಂತ ಕುಲಕರ್ಣಿ, ಮಲ್ಲಿಕಾರ್ಜುನ ರೋಗನ, ಸುಭಾಷ ಪಾಟೀಲ್​, ಸುಭಾಷ ರಡ್ಡಿ, ಸಿದ್ದು ಸ್ವಾಮಿ, ಮಡಿವಾಳಯ್ಯ ಸ್ವಾಮಿ, ಮಲ್ಲಿಕಾರ್ಜುನ ಮಠಪತಿ, ಬಸವರಾಜ ಮಚಕುರಿ, ಅವಿನಾಶ ಪೊಲದಾಸ, ಅಣ್ಣೆಪ್ಪ ಸಿಂಧನಕೇರಾ ಇತರರಿದ್ದರು.