ಡೀಸೆಲ್​ ಅಭಾವದಿಂದ ಕೃಷಿ ಚಟುವಟಿಕೆಗೆ ಸ್ಥಗಿತ

ಹುಲಸೂರಿನ ಸುಗ್ರೆ ಪೆಟ್ರೋಲ್​ ಬಂಕ್​ನಲ್ಲಿ  ರೈತರು ಡೀಸೆಲ್​ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವುದು.ಕಾಣಬಹುದು.
ಹುಲಸೂರಿನ ಸುಗ್ರೆ ಪೆಟ್ರೋಲ್​ ಬಂಕ್​ನಲ್ಲಿ ರೈತರು ಡೀಸೆಲ್​ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವುದು.ಕಾಣಬಹುದು.
Published on

ಪ್ರಮುಖ ಮುಖ್ಯಾಂಶಗಳು

  • ಹುಲಸೂರಿನಲ್ಲಿ ರೈತರ ಪರದಾಟ
ಹುಲಸೂರು: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಪೆಟ್ರೋಲ್​ ಬಂಕ್​ಗಳಲ್ಲಿ ಡೀಸೆಲ್​ ಅಭಾವ ತಲೆದೋರಿರುವ ಕಾರಣ ಬಿತ್ತನೆ ಸಮಯದಲ್ಲೆ ಇಂಧನ ಸಿಗದೆ ರೈತರು ಬಂಕ್​ಗಳ ಮುಂದೆ ಕಾದು ಪರದಾಡುವಂತಾಗಿದೆ. ಕೃಷಿ ಚಟುವಟಿಕೆಗೆ ಬಳಸುವ ಟ್ರಾಕ್ಟರ್​, ಟಂಟಂಗಳಿಗೆ ಸಮರ್ಪಕ ಡೀಸೆಲ್​ ಸಿಗದೆ ಸಮಸ್ಯೆ ಉಂಟಾಗಿದ್ದು, ಬುಧವಾರ ಪಟ್ಟಣದ ಸುಗರೆ ಪೆಟ್ರೋಲ್​ ಬಂಕ್​ ಬಳಿ ರೈತರು ಸರದಿ ಸಾಲಿನಲ್ಲಿ ನಿಂತು ಡೀಸೆಲ್​ ಸಿಗದೇ ಮರಳುತ್ತಿರುವುದು ಸಾಮಾನ್ಯವಾಗಿತ್ತು. ಸರ್ಕಾರ ಯಾವುದೇ ಪೆಟ್ರೋಲ್​ ಬಂಕ್​ನವರು ಕ್ಯಾನ್​ಗಳಲ್ಲಿ ಡೀಸೆಲ್​ ಹಾಗೂ ಪೆಟ್ರೋಲ್​ ಮಾರಾಟ ಮಾಡಬಾರದು ಎಂಬ ನಿಯಮ ಜಾರಿಗೆ ತಂದಿದ್ದರಿಂದ ಒಂದು ಟ್ರಾಕ್ಟರಿಗೆ ಕೇವಲ 2000 ರೂ. ಡೀಸೆಲ್​ ನೀಡುತ್ತಿದ್ದರಿಂದ ಹೊಲದಲ್ಲಿ ಕೆಲಸ ಮಾಡುವ ಟ್ರಾಕ್ಟರ್​ ಮತ್ತೆ ಪೆಟ್ರೋಲ್​ ಬಂಕ್​ಗೆ ಬರಬೇಕಾದರೆ ದುಬಾರಿ ಹಣ ಖರ್ಚಾಗುತ್ತಿವೆ ಎಂಬ ಉದ್ದೇಶದಿಂದ ಬಹುತೇಕ ಟ್ರಾಕ್ಟರ್​ ಮಾಲೀಕರು ಕೃಷಿ ಚಟುವಟಿಕೆ ಸ್ಥಗಿತ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ರೈತ ಪ್ರಮುಖರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಆದಷ್ಟು ಬೇಗನೆ ರೈತರಿಗೆ ಡೀಸೆೆಲ್​ ಸಿಗುವ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net