ಬಸವ ಮಾರ್ಗದಲ್ಲಿಯೇ ನೆಮ್ಮದಿ ಬದುಕು

ಬಸವಕಲ್ಯಾಣದಲ್ಲಿ ಸೋಮವಾರ ಆಯೋಜಿಸಿದ್ದ  ತಿಂಗಳ ಅನುಭವ ಮಂಟಪ 21 ಕಾರ್ಯಕ್ರಮದಲ್ಲಿ ಡಾ.ಮೃತ್ಯುಂಜಯ ರುಮಾಲೆ ಕೃತಿಂಯನ್ನು ಶ್ರೀ ಗುರುಬಸವ ಪಟ್ಟದ್ದೇವರು ಲೋಕಾರ್ಪಣೆ ಮಾಡಿದರು. ಶ್ರೀ ಶಿವಾನಂದ ಸ್ವಾಮೀಜಿ,  ಪೂಜ್ಯ ಸುಗುಣಾತಾಯಿ, ಡಾ.ಮೃತ್ಯುಂಜಯ ರುಮಾಲೆ, ಡಾ.ಸೋಮನಾಥ ಯಾಳವಾರ, ಸುರೇಶ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ನಾಗಪ್ಪ ನಿಣ್ಣೆ ಇತರರಿದ್ದರು.
ಬಸವಕಲ್ಯಾಣದಲ್ಲಿ ಸೋಮವಾರ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ 21 ಕಾರ್ಯಕ್ರಮದಲ್ಲಿ ಡಾ.ಮೃತ್ಯುಂಜಯ ರುಮಾಲೆ ಕೃತಿಂಯನ್ನು ಶ್ರೀ ಗುರುಬಸವ ಪಟ್ಟದ್ದೇವರು ಲೋಕಾರ್ಪಣೆ ಮಾಡಿದರು. ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಸುಗುಣಾತಾಯಿ, ಡಾ.ಮೃತ್ಯುಂಜಯ ರುಮಾಲೆ, ಡಾ.ಸೋಮನಾಥ ಯಾಳವಾರ, ಸುರೇಶ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ನಾಗಪ್ಪ ನಿಣ್ಣೆ ಇತರರಿದ್ದರು.
Published on: 

ಬಸವಕಲ್ಯಾಣ: ಗುರು ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ತೋರಿದ ಮಾರ್ಗದಲ್ಲಿ ನಡೆದರೆ ನೆಮ್ಮದಿಯಿಂದ ಕೂಡಿದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ನಗರದ ಅನುಭವ ಮಂಟಪ ಪರಿಸರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವಮಂಟಪ 21 ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯನು ತನ್ನ ದೇಹವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಶರಣರು ಇದಕ್ಕೆ ಪ್ರಸಾದ ಕಾಯ ಎಂದು ಕರೆದಿದ್ದಾರೆ ಎಂದರು.

ನಮ್ಮ ದೇಹ ದೇಗುಲ ಮಾಡಿಕೊಳ್ಳಬೇಕೆಂಬುದು ಬಸವಣ್ಣನವರು ಹೇಳುತ್ತಾರೆ. ದೇಹ ದೇವಾಲಯ ಮಾಡಿಕೊಳ್ಳುವುದೆಂದರೆ, ನಮ್ಮ ಜೀವನ ನಿರ್ವ್ಯಸನವಾಗಿ ನಡೆಸುವುದು. ಒಳ್ಳೆಯ ಆಚಾರ- ವಿಚಾರ ಅಳವಡಿಸಿಕೊಳ್ಳುವುದು. ಸದಾಚಾರವೇ ಸ್ವರ್ಗ ಅನಾಚಾರವೇ ನರಕ ಎಂಬುದು ನಾವು ತಿಳಿದುಕೊಳ್ಳಬೇಕು. ಅಲ್ಲಮ ಪ್ರಭುಗಳು ವಚನಗಳ ಹಾಗೂ ಸ್ವರವಚನಗಳ ಮೂಲಕ ನಮಗೆ ಬದುಕುವ ದಾರಿಯನ್ನು ತೋರಿಸಿದ್ದಾರೆ ಎಂದರು.

ಅಲ್ಲಮರ ಸ್ವರವಚನ ಅರ್ಥಪೂರ್ಣವಾಗಿ ಅನುಭಾವಿಕ ನೆಲೆಯಲ್ಲಿ ಡಾ.ಮೃತ್ಯುಂಜಯ ರುಮಾಲೆ ರಚಿಸಿದ ಉಳ್ಳವರು ಶಿವಾಲಯ, ದೇಹ ದೇಗುಲ ಎಂಬ ಕೃತಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಇದನ್ನು ಎಲ್ಲರೂ ಓದಬೇಕು ಎಂದು ಹೇಳಿದರು.

ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಅನುಭಾವ ನೀಡಿ, ಅಲ್ಲಮರು ಜಗತ್ತಿನ ಶ್ರೇಷ್ಠ ಅನುಭಾವಿಗಳು. ಅವರ ಎತ್ತರ ನಾವಿನ್ನು ತಲುಪಲು ಸಾಧ್ಯವಾಗಲಿಲ್ಲ. ವಚನಗಳನ್ನು ನಾವು ಅನುಭಾವಿಕ ನೆಲೆಯಲ್ಲಿ ತಿಳಿದುಕೊಳ್ಳಬೇಕು. ಅಲ್ಲಮರು ಸಿದ್ಧರಾಮ, ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದವರ ಜತೆ ನಡೆಸಿದ ಸಂವಾದ ಜಗತ್ತಿನ ಅಧ್ಯಾತ್ಮ ಪರಂಪರೆಯ ಸರ್ವಶ್ರೇಷ್ಠ ಸಂವಾದವಾಗಿದೆ. ಈ ಸಂವಾದಕ್ಕೆ ಜಗತ್ತಿನ ದಾರ್ಶನಿಕರ ಸಂವಾದದ ಜತೆ ನಾವು ತೌಲನಿಕ ಅಧ್ಯಯನ ಮಾಡಬಹುದು ಎಂದು ಹೇಳಿದರು.

ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಸುಗುಣಾತಾಯಿ ಸಮ್ಮುಖ ವಹಿಸಿದ್ದರು. ಡಾ.ಮೃತ್ಯುಂಜಯ ರುಮಾಲೆ ಬರೆದ ಉಳ್ಳವರ ಶಿವಾಲಯ, ದೇಹ ದೇಗುಲ ಕೃತಿಯನ್ನು ಶ್ರೀ ಗುರುಬಸವ ಪಟ್ಟದ್ದೇವರು ಲೋಕಾರ್ಪಣೆ ಮಾಡಿದರು. ಡಾ.ಸೋಮನಾಥ ಯಾಳವಾರ ಗ್ರಂಥ ಪರಿಚಯ ಮಾಡಿಕೊಟ್ಟರು. ಸುರೇಶ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ನಾಗಪ್ಪ ನಿಣ್ಣೆ ಇದ್ದರು. ರಾಜು ಜುಬರೆ ಸ್ವಾಗತಿಸಿದರು. ಅಂಬರೀಷ ಭಿಮಾಣಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net