ಒಗ್ಗಟ್ಟಿನಿಂದ ನಡೆದರೆ ಸುಂದರ ಜೀವನ

ಹುಲಸೂರುರಿನಲ್ಲಿ ಸಾಹುಕಾರ ಗಣೇಶ ಮಂಡಳದಿಂದ ಶನಿವಾರ ಸಂಜೆ ಆಯೋಜಿಸಿದ್ದ ಸಾಂಸತಿಕ ಕಾರ್ಯಕ್ರಮವನ್ನು ಶ್ರೀ ರಾಜೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಚಂದ್ರಕಾಂತ ದೇಟ್ನೆ,  ವೈಜನಾಥ ಮೇತ್ರಿ, ಜಗನ್ನಾಥ ದೇಟ್ನೆ, ನಾಗೇಶ ಮೋರೆ, ವೀರೇಶ ವಡ್ಡೆ, ರವೀಂದ್ರ ದೇಟ್ನೆ , ಶೇಖರ ಪಂಚಾಳ, ಆನಂದ ದೇಟ್ನೆ ಇತರರಿದ್ದರು.

Published on: 

ಹುಲಸೂರು: ಭಾರತದಲ್ಲಿ ವಿವಿಧ ಧರ್ಮ, ಭಾಷೆ ಮತ್ತು ಸಂಸತಿಗಳ ಜನರಿದ್ದರೂ ಸಹ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಾಗಿ ಬಾಳುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ, ನಾವೆಲ್ಲರೂ ಭೇದಭಾವ ಮರೆತು ಕೈಜೋಡಿಸಿ ನಡೆದರೆ ಜೀವನ ಸುಂದರವಾಗಿರುತ್ತದೆ ಎಂದು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

ಪಟ್ಟಣದ ಸಾಹುಕಾರ ಗಣೇಶ ಮಂಡಳದಿಂದ ಶನಿವಾರ ಸಂಜೆ ಆಯೋಜಿಸಿದ್ದ ಸಾಂಸತಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಹುಲಸೂರು ಶಾಂತವಾಗಿದ್ದು, ಎಲ್ಲರೂ ಅನನ್ಯವಾಗಿ ಜೀವನ ಸಾಗಿಸುತ್ತಾರೆ. ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲಿ ಹುಟ್ಟಿಕೊಳ್ಳಬೇಕು. ಸಮಾಜ ಒಡೆಯುವ ಕೆಲಸ ಎಂದು ಮಾಡಬಾರದು ಎಂದರು.

ಮೇಹಕರ- ತಡವಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ, ಹಿಂದೂ ಧರ್ಮದಲ್ಲಿ ಗಣೇಶನನ್ನು ಅತ್ಯಂತ ಕ್ರಿಯಾಶೀಲ, ಜಾಗೃತ ಮತ್ತು ಪ್ರಥಮ ಪೂಜಿತ ದೇವರೆಂದು ಪರಿಗಣಿಸಲಾಗುತ್ತದೆ. ಗಣೇಶ ಮಂಡಳದವರು ಮೆರವಣಿಗೆ ಹಾಗೂ ಡಿಜೆಗೆ ದುಂದು ವೆಚ್ಚ ಮಾಡದೆ ಸಾಂಸತಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದರು.

ತ್ರಿಪುರಾಂತ ಗವಿಮಠದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಸ್ವಾತಂತ್ರ್ಯಕ್ಕಿಂತ ಪೂರ್ವದಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡಿದರು ಎಂದು ಹೇಳಿದರು.

ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಚಂದ್ರಕಾಂತ ದೇಟ್ನೆ, ಮಂಡಳಿ ಅಧ್ಯಕ್ಷ ಜಗನ್ನಾಥ ದೇಟ್ನೆ, ಗ್ರಾಪಂ ಸದಸ್ಯ ವೈಜಿನಾಥ ಮೇತ್ರಿ, ಪ್ರಮುಖರಾದ ನಾಗೇಶ ಮೋರೆ, ರವೀಂದ್ರ ದೇಟ್ನೆ , ಶೇಖರ ಪಂಚಾಳ, ಸುನೀಲ ಹೊನ್ನಾಡೆ, ಸಂತೋಷ ದೇಟ್ನೆ, ಶಿವಕುಮಾರ ಪಂಚಾಳ, ಆನಂದ, ರಾಜಕುಮಾರ ಜಾಕಾ, ಪ್ರವಿಣ ಹಾರಕೂಡೆ, ರಾಜಪ್ಪ ಗೈಬಾಜೆ ಇತರರಿದ್ದರು. ವೀರೇಶ ವಡ್ಡೆ ಸ್ವಾಗತಿಸಿದರು. ಎಂ.ಬಿ ಪಂಚಾಳ ನಿರೂಪಣೆ ಮಾಡಿದರು. ರಂಗೋಲಿ ಸ್ಪರ್ಧೆ ಸೇರಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳ ಸಾಂಸತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಮಹಾಪ್ರಸಾದ ಸೇವೆಯನ್ನು ರಾಜಪ್ಪ ಗೈಬಾಜೆ ಖಂಡಾಳ ನಡೆಸಿಕೊಟ್ಟರು.

ಹುಲಸೂರುರಿನಲ್ಲಿ ಸಾಹುಕಾರ ಗಣೇಶ ಮಂಡಳದಿಂದ ಶನಿವಾರ ಸಂಜೆ ಆಯೋಜಿಸಿದ್ದ ಸಾಂಸತಿಕ ಕಾರ್ಯಕ್ರಮವನ್ನು ಶ್ರೀ ರಾಜೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಚಂದ್ರಕಾಂತ ದೇಟ್ನೆ, ವೈಜನಾಥ ಮೇತ್ರಿ, ಜಗನ್ನಾಥ ದೇಟ್ನೆ, ನಾಗೇಶ ಮೋರೆ, ವೀರೇಶ ವಡ್ಡೆ, ರವೀಂದ್ರ ದೇಟ್ನೆ , ಶೇಖರ ಪಂಚಾಳ, ಆನಂದ ದೇಟ್ನೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net