ಬೀದರ್ ಜಿಲ್ಲಾದ್ಯಂತ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ

Bidar Rain
Published on

ಬೀದರ್: ಜಿಲ್ಲೆಯ ವಿವಿಧೆಡೆ ರಾತ್ರಿಯಿಡೀ ಸುರಿದ ಮಳೆಯ ಕಾರಣ ಹಲವೆಡೆ ಸಣ್ಣ ಸೇತುವೆಗಳ ಮೇಲಿಂದಲೇ ನೀರು ಹರಿಯ ತೊಡಗಿದೆ. ಇದರಿಂದಾರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರಮುಖವಾಗಿ ಇಂಚೂರು- ಗೋರಚಿಂಚೋಳಿ ಸೇತುವೆ ಜಲಾವೃತವಾಗಿ ಭಾಲ್ಕಿ- ಬಸವಕಲ್ಯಾಣ, ಭಾಲ್ಕಿ-ನೀಲಂಗಾ-ಶಹಜಾನಿ ಔರಾದ್ ರಸ್ತೆ ಸಂಪರ್ಕ ಕಡಿತವಾಗಿದೆ.

ಅದೇ ರೀತಿ, ಭಾಲ್ಕಿಯ ಆನಂದವಾಡಿ- ನಿಡೆಬಾನ್- ಕೋರೂರು ಸೇತುವೆ ಸಹ ಜಲಾವೃತ‌. ಈ ಮಾರ್ಗದ ಸಂಪರ್ಕ ಕಡಿತ. ಸೇತುವೆ ಮೇಲಿಂದ ಎರಡೂವರೆ ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.

ಬೀದರ್ ಜಿಲ್ಲೆಯಲ್ಲದೆ ನೆರೆಯ ಮಹಾರಾಷ್ಟ್ರದಲ್ಲೂ ಸುರಿಯುತ್ತಿರುವ ಮಳೆ. ಜಿಲ್ಲೆಯ ಮಾಂಜ್ರಾ ನದಿಗೆ ಹರಿದುಬರುತ್ತಿರುವ ವ್ಯಾಪಕ ನೀರು. ಮಾಂಜ್ರಾಗೆ ಪ್ರವಾಹ ಭೀತಿ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net