More

    ಚೆನ್ನೈ-ಮೈಸೂರ್ ಬುಲೆಟ್ ವೇಗ; ಏಳು ರೈಲು ಯೋಜನೆಗೆ 10 ಲಕ್ಷ ಕೋಟಿ ರೂ.ಹೂಡಿಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮುಂಬೈ – ಅಹಮದಾಬಾದ್ ಬುಲೆಟ್ ರೈಲು ಯೋಜನೆ ಕರೊನಾ ಕಾರಣಕ್ಕೆ ವಿಳಂಬಗೊಂಡಿರುವ ಹೊರತಾಗಿಯೂ ಚೆನ್ನೈ-ಮೈಸೂರು ಮಾರ್ಗ ಸೇರಿದಂತೆ ದೇಶಾದ್ಯಂತ ಏಳು ಹೊಸ ಮಾರ್ಗಗಳಲ್ಲಿ ಬುಲೆಟ್ ರೈಲು ಯೋಜನೆಗಾಗಿ 10 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

    ದೆಹಲಿ-ವಾರಾಣಸಿ, ಮುಂಬೈ-ನಾಗ್ಪುರ, ದೆಹಲಿ-ಅಹಮ ದಾಬಾದ್, ಚೆನ್ನೈ-ಮೈಸೂರು, ದೆಹಲಿ-ಅಮೃತಸರ, ಮುಂಬೈ-ಹೈದರಾಬಾದ್ ಮತ್ತು ವಾರಾಣಸಿ-ಹೌರಾ ಮಾರ್ಗದಲ್ಲಿ ಹೈ-ಸ್ಪೀಡ್ ಬುಲೆಟ್ ರೈಲು ಯೋಜನೆ ಆರಂಭಿಸುವ ಚಿಂತನೆ ಕೇಂದ್ರ ಸರ್ಕಾರಕ್ಕಿದೆ. ಈ ಯೋಜನೆ ವ್ಯಾಪ್ತಿ 4,869 ಕಿ.ಮೀ.ಗಳಾಗಿದ್ದು, ಒಟ್ಟಾರೆ ಯೋಜನೆ ವೆಚ್ಚ 10 ಲಕ್ಷ ಕೋಟಿ ರೂ. (10 ಟ್ರಿಲಿಯನ್ ರೂ.) ಎಂದು ಅಂದಾಜಿಸಲಾಗಿದೆ. ಅಂದರೆ ಪ್ರತಿ ಕಿ.ಮೀ. ಕಾಮಗಾರಿಗೆ ಸುಮಾರು 213 ಕೋಟಿ ರೂ. ತಗುಲಬಹುದು. ಏಳು ಹೊಸ ಬುಲೆಟ್ ರೈಲು ಕಾರಿಡಾರ್ ಯೋಜನೆಗಳಿಗೆ ವಿಸõತ ಯೋಜನಾ ವರದಿ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಇದನ್ನೂ ಓದಿ:  ರಾಗಿಣಿಯನ್ನು ತಬ್ಬಿಕೊಂಡು ಬೀಳ್ಕೊಟ್ಟ ಸಂಜನಾ: ಸಾಂತ್ವನ ಕೇಂದ್ರದಲ್ಲಿ ಗದ್ಗದಿತರಾದ ನಟಿಯರು!

    ವರದಿ ಸಿದ್ಧಪಡಿಸಿದ ನಂತರವೇ ಯೋಜನೆಯ ಒಟ್ಟು ವೆಚ್ಚ ಎಷ್ಟು ಎಂಬುದನ್ನು ನಿರ್ಧರಿಸಬಹುದೆಂದು ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮದ (ಎನ್​ಎಚ್​ಎಸ್​ಆರ್​ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಹೇಳಿದ್ದಾರೆ.

    ವೆಚ್ಚ ವ್ಯತ್ಯಾಸ: ಮುಂಬೈ-ಅಹಮದಾಬಾದ್ ಯೋಜನೆಗೆ ಬಳಸಲಾಗುತ್ತಿರುವ ಜಪಾನಿನ ಶಿಂಕಾನ್​ಸೆನ್ ತಂತ್ರಜ್ಞಾನವನ್ನು ಉಳಿದ ಎಲ್ಲ ಯೋಜನೆಗಳಿಗೆ ಬಳಸುವುದಿಲ್ಲ. ಹೀಗಾಗಿ ಆ ಯೋಜನೆಗಳ ವೆಚ್ಚ ಭಿನ್ನವಾಗಿರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

    ಹೀಗಾಗಿ ಇದರ ಪರಿಣಾಮವನ್ನು ನಿರ್ಣಯಿಸುವುದು ಕಷ್ಟ ಎಂದು ಅಚಲ್ ಖರೆ ಹೇಳಿದ್ದಾರೆ. 508.17 ಕಿ.ಮೀ ಉದ್ದದ ಮಾರ್ಗದಲ್ಲಿ 345 ಕಿ.ಮೀ ಅಂದರೆ ಶೇ.68ರಷ್ಟು ಮಾರ್ಗದ ಕಾಮಗಾರಿಗಳಿಗೆ ಟೆಂಡರ್ ನೀಡಲಾಗುತ್ತಿದೆ. ಮುಂಬೈನಲ್ಲಿ ಒಂದು ಸುರಂಗ ನಿಲ್ದಾಣ ಸೇರಿ 6 ನಿಲ್ದಾಣ ಇರಲಿವೆ. ಇದನ್ನೂ ಓದಿ: ಮೈಕ್ರೋಸಾಫ್ಟ್ ಗೆ ಸಿಗದ ಟಿಕ್‌ಟಾಕ್: ಒರಾಕಲ್‌ನಿಂದ ಖರೀದಿ

    ವೆಚ್ಚ ಹೆಚ್ಚಳ ಸಾಧ್ಯತೆ: ಭೂ ಸ್ವಾಧೀನದ ಹೊರತಾಗಿಯೂ ಜಪಾನಿನ ಯೆನ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡಿರುವುದೂ ಯೋಜನೆ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ. ವೆಚ್ಚ ಹೆಚ್ಚಳ ವಿಚಾರ ಇನ್ನೂ ದೃಢಪಟ್ಟಿಲ್ಲವಾದರೂ ಯೋಜನೆಯ ಅಂದಾಜು ಮೊತ್ತ 1.08 ಲಕ್ಷ ರೂ.ನಿಂದ 1.70 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ., ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರ ತಲಾ 5 ಸಾವಿರ ಕೋಟಿ ರೂ. ಪಾವತಿಸಬೇಕು. ಮಿಕ್ಕ ಹಣವನ್ನು ಜಪಾನ್ ಶೇಕಡ 0.1 ಬಡ್ಡಿ ದರದಲ್ಲಿ ಸಾಲ ನೀಡಲಿದೆ. ಪೂರ್ಣಗೊಳ್ಳುವ ಅವಧಿ 2028ರವರೆಗೂ ಮುಂದೂಡಿಕೆಯಾಗಬಹುದೆನ್ನಲಾಗಿದೆ.

    ಉದ್ದೇಶಿತ 7 ಮಾರ್ಗ
    • ಚೆನ್ನೆ-ಬೆಂಗಳೂರು- ಮೈಸೂರು (435 ಕಿ.ಮೀ.)
    • ದೆಹಲಿ-ನೊಯ್ಡಾ-ಆಗ್ರಾ-ಲಖನೌ-ವಾರಾಣಸಿ (865 ಕಿ.ಮೀ.)
    • ವಾರಾಣಸಿ-ಪಟನಾ- ಹೌರಾ (760 ಕಿ.ಮೀ.)
    • ದೆಹಲಿ-ಜೈಪುರ- ಉದಯಪುರ- ಅಹಮದಾಬಾದ್ (886 ಕಿ.ಮೀ.)
    • ದೆಹಲಿ-ಚಂಡೀಗಢ- ಲೂಧಿಯಾನ- ಜಲಂಧರ್- ಅಮೃತಸರ (459 ಕಿ.ಮೀ.)
    • ಮುಂಬೈ-ನಾಸಿಕ್- ನಾಗ್ಪುರ (753 ಕಿ.ಮೀ.)
    • ಮುಂಬೈ-ಪುಣೆ- ಹೈದರಾಬಾದ್ (711 ಕಿ.ಮೀ.)
    1.30 ಗಂಟೆ ಸಾಕು!

    ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೈಸೂರು – ಬೆಂಗಳೂರು – ಚೆನ್ನೈ ಹೈಸ್ಪೀಡ್ ಬುಲೆಟ್ ರೈಲು ಮುನ್ನೆಲೆಗೆ ಬಂದಿದೆ. ಬೆಂಗಳೂರು ಮೂಲಕ ಹಾದು ಹೋಗುವ 435 ಕಿ.ಮೀ. ಮೈಸೂರು-ಚೆನ್ನೈ ನಡುವೆ ಹೈ ಸ್ಪೀಡ್ ರೈಲು ಮಾರ್ಗ ನಿರ್ವಣಕ್ಕೆ ಚಿಂತನೆ ನಡೆಸಲಾಗಿದೆ. ಯೋಜನೆಗೆ ಬೇಕಾಗುವ ಭೂಸ್ವಾಧೀನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ)ಕ್ಕೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಹೈಸ್ಪೀಡ್ ರೈಲು ಮಾರ್ಗಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಹೀಗಾಗಿ ಮೈಸೂರಿನಿಂದ ಬೆಂಗಳೂರಿಗೆ 30ರಿಂದ 45 ನಿಮಿಷದಲ್ಲಿ ಮತ್ತು 1 ಗಂಟೆ 30 ನಿಮಿಷದಲ್ಲಿ ಮೈಸೂರಿನಿಂದ ಚೆನ್ನೈಗೆ ತಲುಪಬಹುದಾಗಿದೆ.

    ಕೊನೆಗೂ ₹1 ದಂಡ ಕಟ್ಟಿದ ವಕೀಲ ಪ್ರಶಾಂತ್​ ಭೂಷಣ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts