More

    ಮೈಕ್ರೋಸಾಫ್ಟ್ ಗೆ ಸಿಗದ ಟಿಕ್‌ಟಾಕ್: ಒರಾಕಲ್‌ನಿಂದ ಖರೀದಿ

    ನ್ಯೂಯಾರ್ಕ್: ಮೈಕ್ರೋಸಾಫ್ಟ್ ಮುಂದಿಟ್ಟ ಪ್ರಸ್ತಾಪವನ್ನು ತಿರಸ್ಕರಿಸಿರುವ ಚೀನಾದ ವಿಡಿಯೋ ಆ್ಯಪ್ ಟಿಕ್‌ಟಾಕ್, ಒರಾಕಲ್ ಕಂಪನಿಯ ತೆಕ್ಕೆ ಸೇರಲು ಒಪ್ಪಿಗೆ ಸೂಚಿಸಿದೆ. ಈ ಮಾರಾಟದಿಂದಾಗಿ ಅಮೆರಿಕನ್ನರು ಟಿಕ್‌ಟಾಕ್ ಬಳಸುವುದು ನಿರಾತಂಕವಾಗಿ ಮುಂದುವರಿಯಲಿದೆ.

    ಸೆ. 20ರೊಳಗೆ ಟಿಕ್‌ಟಾಕ್ ಆ್ಯಪನ್ನು ಅಮೆರಿಕದ ಯಾವುದಾದರೂ ಕಂಪನಿಗೆ ಮಾರಬೇಕು ಎಂದು ಆ ರಾಷ್ಟ್ರದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಡುವು ವಿಧಿಸಿದ್ದರು. ಟಿಕ್‌ಟಾಕ್‌ನ ಚೀನಿ ಮಾತೃ ಸಂಸ್ಥೆ ಬೈಟ್‌ಡಾನ್ಸ್‌ನೊಂದಿಗೆ ವ್ಯವಹಾರ ನಿಲ್ಲಿಸುವಂತೆ ಟ್ರಂಪ್, ಅಮೆರಿಕದ ಕಂಪನಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಸೆ. 20ರ ಗಡುವನ್ನು ವಿಸ್ತರಿಸುವುದಿಲ್ಲವೆಂದೂ ಸ್ಪಷ್ಟಪಡಿಸಿದ್ದರು. ಹೀಗಾಗಿ ಟಿಕ್‌ಟಾಕ್ ಆ್ಯಪನ್ನು ಅಮೆರಿಕದ ಕಂಪನಿಗೆ ಮಾರುವುದು ಚೀನಿ ಕಂಪನಿಗೆ ಅನಿವಾರ್ಯವಾಗಿತ್ತು. ಇದನ್ನೂ ಓದಿ: ‘ಮೊಘಲ್​ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮ್ಯೂಸಿಯಂ’ ಎಂದು ಬದಲಿಸಿದ ಯೋಗಿ ಆದಿತ್ಯನಾಥ್​

    ಟಿಕ್‌ಟಾಕ್ ಖರೀದಿ ಬಿಡ್‌ನಲ್ಲಿ ಒರೇಕಲ್ ಗೆದ್ದಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಮತ್ತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿವೆ. ಆದರೆ, ಕಂಪನಿ ಅದನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಒರೇಕಲ್ ಪಡೆದಿರುವ ಬಿಡ್‌ಗೆ ಶ್ವೇತಭವನ ಹಾಗೂ ವಿದೇಶಿ ಹೂಡಿಕೆಯ ಸಮಿತಿಯ ಅಂಗೀಕಾರ ಮುದ್ರೆ ಅಗತ್ಯವಾಗಿದ್ದು, ಅದಕ್ಕಾಗಿಯೇ ಅಧಿಕೃತ ಪ್ರಕಟಣೆ ಇನ್ನೂ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ದತ್ತಾಂಶ ಭದ್ರತೆಯ ನಿಯಮಗಳನ್ನು ಎರಡೂ ಕಂಪನಿಗಳು ಪಾಲಿಸುತ್ತವೆ ಎಂಬ ನಂಬಿಕೆಯ ಆಧಾರದಲ್ಲಿ ಸರ್ಕಾರ ಈ ಮಾರಾಟಕ್ಕೆ ಅನುಮತಿ ನೀಡುವ ಸಾಧ್ಯತೆ ಹೆಚ್ಚಾಗಿದೆ.

    ಸ್ಟ್ರಾಬೆರಿ ಕೃಷಿಕನ ಮಗ ಜಪಾನ್​ನ ನೂತನ ಪ್ರಧಾನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts