ಬೀದರ್, ವಿಜಯಪುರ ಜಿಲ್ಲಾಡಳಿತ ಸಂಕೀರ್ಣ ಹಾಗೂ ಕೆಕೆ ಆರ್ ಡಿಬಿ ಅನುದಾನದಲ್ಲಿ 16 ತಾಲೂಕು ಕಚೇರಿ ನಿರ್ಮಿಸಲು ಸಂಪುಟ ಒಪ್ಪಿಗೆ

Cm
Published on

ಕಲಬುರಗಿ : ಬೀದರ್ ಜಿಲ್ಲಾ ಕಚೇರಿ ಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ 59.80 ಕೋಟಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯನ್ನು ಇಂದು ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀಡಲಾಯಿತು

  • ವಿಜಯಪುರ ಜಿಲ್ಲೆಯ ಜಿಲ್ಲಾ ಕಚೇರಿ ಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ 55.60 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ಸಹ ದೊರೆಯಿತು.
  • ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೊಸದಾಗಿ ರಚನೆಯಾದ 16 ತಾಲ್ಲೂಕು ಗಳಲ್ಲಿ

ಮಾದರಿಯ ತಾಲ್ಲೂಕು ಆಡಳಿತಸೌಧ ಕಟ್ಟಡ ಗಳನ್ನು ಒಟ್ಟು 137 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net