ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ

06-05-bidadi-1
Published on

ಬಿಡದಿ

ಮತದಾನದಿಂದ ಯಾರೂ ವಂಚಿತರಾಗಬೇಡಿ. ಕಡ್ಡಾಯವಾಗಿ ಮತದಾನ ಮಾಡಿ ಎಂದು ತ್ಯಾಗರಾಜು ಸೆಂಟ್ರಲ್​ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಸನ್ನಕುಮಾರ್​ ಹೇಳಿದರು.

ಪಟ್ಟಣದಲ್ಲಿ  ಹಮ್ಮಿಕೊಂಡಿದ್ದ ಮತದಾನದ ಹಕ್ಕು ಅಭಿಯಾನದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಜನರ ಪ್ರಮುಖ ಹಕ್ಕು ಮತ್ತು ಕರ್ತವ್ಯ. ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳು. ಚುನಾವಣೆಯ ಯಶಸ್ಸು ಮತದಾನವನ್ನು ಅವಲಂಬಿಸಿರುತ್ತದೆ. ಹಾಗಾಗಿ ಮರೆಯದೆ ಮತದಾರರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿ, ಪ್ರಜಾಪ್ರಭುತ್ವ ಉಳಿಸಿ ಎಂದು ಮನವಿ ಮಾಡಿದರು.

ಮತದಾನ ಜಾಗೃತಿ ಮೂಡಿಸುವ ಬಿತ್ತಿ ಪತ್ರವನ್ನು ಕೈಯಲ್ಲಿ ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅರಿವು ಮೂಡಿಸಲಾಯಿತು. ರಸ್ತೆಯ ಪಕ್ಕದಲ್ಲಿನ ಅಂಗಡಿಗಳು ಹಾಗೂ ಮನೆಗಳಿಗೆ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಶಾಲೆಯ 50ಕ್ಕೂ ಹೆಚ್ಚು ಶಿಕರು ಹಾಗೂ ಸಿಬ್ಬಂದಿ ಮತದಾನದ ಅಭಿಯಾನ ಜಾಥದಲ್ಲಿ ಭಾಗವಹಿಸಿದ್ದರು.

ಶಾಲೆಯ ಶಿಕ್ಷಕರಾದ  ನಟರಾಜ್​, ಉಷಾ, ರಾಮಣ್ಣ, ಸುನೀಲ್​, ಸಂದೇಶ್​, ವನಜಾ, ಸುಮಾ, ವೀಣಾಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net