

ಕಾರವಾರ: ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೈಸಿಕಲ್ ರೈಡ್ ನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ಜು ಭಾನುವಾರ ಬೆಳಗ್ಗೆ 5:30 ಗಂಟೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ನ ಡಾ. ಸುರೇಶ ಭಟ್ಟ್ ಅವರು ಜಂಟಿಯಾಗಿ ಉದ್ಘಾಟಿಸಿದರು.
ಇದನ್ನೂ ಓದಿ: ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್ ಶುಭಾರಂಭ
76 ಕಿಮೀ ವಿಭಾಗ, 38 ಕಿಮೀ ವಿಭಾಗ, ಹಾಗೂ 20 ಕಿಮೀ( ಪನ್ ರೈಡ್) ವಿಭಾಗ ಸೇರಿ ಮೂರು ವಿಭಾಗಗಳಲ್ಲಿ ಬೈಸಿಕಲ್ ಜಾಥಾವನ್ನು ಆಯೋಜನೆ ಮಾಡಲಾಗಿತ್ತು. ಎಲ್ಲ ವಿಭಾಗದಲ್ಲಿ ಮಹಿಳೆಯರುಭಾಗವಹಿಸಿದ್ದು ವಿಶೇಷವಾಗಿತ್ತು.
ಆರೋಗ್ಯ ಮತ್ತು ಪರಿಸರ ರಕ್ಷಣೆಗಾಗಿ ಸೈಕಲ್ ಈ ಬೈಸಿಕಲ್ ಜಾಥಾದ ಮುಖ್ಯ ಉದ್ದೇಶವಾಗಿದೆ. ಎಲ್ಲ ವಿಭಾಗಗಳಲ್ಲಿ ಭಾಗವಹಿಸಿದ 200 ಬೈಸಿಕಲ್ ಸವಾರರಿಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಅವರು ಮೆಡಲ್ ಗಳನ್ನು ವಿತರಿಸಿದರು.