ರಾಮ ಮಂದಿರ ಜೀರ್ಣೋದ್ಧಾರಕ್ಕೆ ಭೂಮಿಪೂಜೆ

20hbd3a
ಹಳೇಬೀಡಿನ ಬ್ರಾಹ್ಮಣರ ಬೀದಿಯ ರಾಮಮಂದಿರ ನವೀಕರಣ ಕಾರ್ಯಕ್ಕೆ ಶುಕ್ರವಾರ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು. ಎಂ.ಮಮತಾ, ಮಧು, ವಿರೂಪಾಕ್ಷ , ನಾಗೇಶರಾವ್ ಮತ್ತಿತರರಿದ್ದರು.
Published on

ಹಳೇಬೀಡು: ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಹಳೇಬೀಡಿನ ರಾಮ ಮಂದಿರ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.

ಇಲ್ಲಿನ ಬ್ರಾಹ್ಮಣರ ಬೀದಿಯಲ್ಲಿರುವ ರಾಮಮಂದಿರ ಜೀರ್ಣೋದ್ಧಾರ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶಾಸಕನಾಗುವುದಕ್ಕೆ ಮುನ್ನ ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ಇಲ್ಲಿನ ರಾಮಮಂದಿರಕ್ಕೆ ಭೇಟಿ ನೀಡಿದ್ದೆ. ಆಗ ಮಂದಿರವು ನವೀಕರಣವಾಗಬೇಕೆಂದು ಸಮಾಜ ಬಾಂಧವರು ಅಪೇಕ್ಷೆ ಪಟ್ಟಿದ್ದರು. ಶಾಸಕನಾದ ಬಳಿಕ ಕೊಟ್ಟ ಭರವಸೆಯಂತೆ 5 ಲಕ್ಷ ರೂ. ಅನುದಾನವನ್ನು ನೀಡಿದ್ದೇನೆ. ಇಲ್ಲಿ ಧಾರ್ಮಿಕ ಕಾರ್ಯಗಳು ಸದಾ ಕಾಲ ನಡೆದು ಹೆಚ್ಚಿನ ಪ್ರಗತಿಯನ್ನು ಕಾಣಲಿ ಎಂದು ಹೇಳಿದರು.

ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಸಂಸ್ಕಾರ ಇರುವ ಕಡೆ ಮಾನವೀಯತೆಯೂ ಉನ್ನತ ಮಟ್ಟದಲ್ಲಿ ಇರುತ್ತದೆ. ಅಂತಹ ವಾತಾವರಣವು ಬ್ರಾಹ್ಮಣ ಸಮಾಜದಿಂದ ಸೃಷ್ಟಿಯಾಗುತ್ತಿದೆ. ಶಾಂತಿ, ಸಹಬಾಳ್ವೆಯ ಪಾಠವು ವೇದಗಳಲ್ಲೇ ಇದ್ದು, ನಮ್ಮ ಪ್ರಾಚೀನತೆಯನ್ನು ಉಳಿಸಿ ಬೆಳಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಸಂಘದ ಗೌರವಾಧ್ಯಕ್ಷ ನಾಗೇಶರಾವ್, ಮಾಜಿ ಅಧ್ಯಕ್ಷ ರಘುನಾಥ್, ಕಾರ್ಯದರ್ಶಿ ನಾಗರಾಜ, ಖಜಾಂಚಿ ಕೃಷ್ಣ , ಉಪಾಧ್ಯಕ್ಷೆ ರೂಪಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net