ಮಹಾಭಾರತದ ಓದು ಇಂದಿಗೂ ಪ್ರಸ್ತುತ : ಲಕ್ಷ್ಮೀಶ ತೋಳ್ಪಾಡಿ ಅಭಿಮತ

New Project (24)
Published on

ವಿಜಯವಾಣಿ ಸುದ್ದಿಜಾಲ ಕಟೀಲು

ಮಹಾಭಾರತ ಹಳೇ ಕಾಲದ ಗ್ರಂಥ. ಇದನ್ನು ಓದದಿದ್ದರೆ ಏನೂ ಆಗುವುದಿಲ್ಲ. ಮಹಾಭಾರತವನ್ನು ಓದಿದರೆ ಕಾಡಬೇಕು. ಗೆದ್ದವನ ದುಃಖ ಬೇರೆ ಯಾವ ಗ್ರಂಥದಲ್ಲೂ ಇಲ್ಲ. ಯುದ್ಧವಾಗಿ ಪಾಂಡವರು ಗೆದ್ದು ಧರ್ಮ ಗೆದ್ದಿತು. ಮಹಾಭಾರತ ಎಂದರೆ ಜಯ. ಗೆದ್ದ ಸಂಭ್ರಮ. ಆದರೆ ಚಕ್ರವರ್ತಿ ಆದ ಧರ್ಮರಾಯ ಯುದ್ಧ ಗೆದ್ದದ್ದು, ಜಯ ಎನ್ನುತ್ತಾರೆ. ಸಂಭ್ರಮ ಎನ್ನುತ್ತಾರೆ. ಆದರೆ ಇದು ಗೆಲುವಿನ ರೂಪದಲ್ಲಿರುವ ಸೋಲು ಎಂದ. ಇದು ಮಹಾಭಾರತದಲ್ಲಿ ಮಾತ್ರ ಇರುವುದು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಯ ಸಂಯೋಜನೆಯಲ್ಲಿ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬದ ಎರಡನೇ ದಿನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ‌್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಜೀವನದಲ್ಲಿ ನಾವು ಏನೋ ಆಗಬೇಕು ಎಂದು ಬಯಸುತ್ತಿರುತ್ತೇವೆ. ಆ ಏನೋ ಒಂದು ಆಗುವ ಸಾಧ್ಯತೆ ಇದೆ. ಸಂಕಟ ಪಡೆಯದೆ ಸಾಕ್ಷಾತ್ಕಾರ ಕಷ್ಟ. ದೊಡ್ಡ ದೊಡ್ಡ ಪದಗಳ ಜತೆಗೆ ಇರುವುದು ಸತ್ಯ ಶೋಧನೆ. ಶೋಧನೆ ಮಾಡದೆ ಸತ್ಯ ತಿಳಿಯುವುದಿಲ್ಲ. ಧರ್ಮ ಸಂಕಟ ಎಂಬ ಪದವೂ ಹಾಗೆಯೇ. ವ್ಯಕ್ತಿತ್ವವನ್ನೇ, ಕಲಿತದ್ದನ್ನು ಪಣಕ್ಕಿಡದೆ ಸತ್ಯಶೋಧನೆ ಆಗುವುದಿಲ್ಲ. ಪಡಲೇಬೇಕಾದ ದುಃಖ ಅಥವಾ ಸಂಕಟ ಎನ್ನುವುದು ಜೀವನದ ಮೊದಲ ದರ್ಶನ ಎಂದರು.

ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net