ರಾಷ್ಟ್ರಧ್ವಜ ಗೌರವಯಾತ್ರೆ ಪೂರ್ವಭಾವಿ ಸಭೆ

New Project (20)
Published on

ಸುಬ್ರಹ್ಮಣ್ಯ: ಗುತ್ತಿಗಾರು ಪ್ರಜಾಧ್ವನಿ ಕರ್ನಾಟಕ ರಾಷ್ಟ್ರಧ್ವಜ ಗೌರವಯಾತ್ರೆಯ ಯಶಸ್ವಿ ಬಗ್ಗೆ ಪೂರ್ವಭಾವಿ ಸಭೆ ಭಾನುವಾರ ಗುತ್ತಿಗಾರಿನಲ್ಲಿ ನಡೆಯಿತು. ನ.27ರಂದು ಗುತ್ತಿಗಾರಿಗೆ ಆಗಮಿಸುವ ಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಯಾತ್ರೆಯ ಮಾಹಿತಿ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.

ಪ್ರಜಾಧ್ವನಿ ಕರ್ನಾಟಕ ಯಾತ್ರೆಯ ಬಗ್ಗೆ ಅಶೋಕ್ ಎಡಮಲೆ ಸಭೆಗೆ ವಿವರಿಸಿದರು. 27ರಂದು ಪ್ರಜಾಧ್ವನಿ ಕರ್ನಾಟಕ ರಾಷ್ಟ್ರಧ್ವಜ ಗೌರವಯಾತ್ರೆ ಸಂಪಾಜೆ ಗೇಟ್ ಬಳಿ ಉದ್ಘಾಟನೆಗೊಂಡು ನಂತರ ಕ್ರಮವಾಗಿ ಸಂಪಾಜೆ, ಅರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಸಾಗಿ ಬರಲಿದೆ ಎಂದರು. ಸಭೆಯಲ್ಲಿ ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net