ಸರ್ಕಾರಿ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ

Oplus_131072
Oplus_131072
Published on

ನಂಜನಗೂಡು: ಪಟ್ಟಣದ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನ ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಹೆಚ್ಚುವರಿ ಕೊಠಡಿಯನ್ನು ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಯಿತು.

ಹಳೇ ಬೇರು ಹೊಸ ಚಿಗುರು ಎಂಬ ಹಳೆ ವಿದ್ಯಾರ್ಥಿಗಳ ಸಂಘ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರೆಲ್ಲ ಸೇರಿ ದಾನಿಗಳ ಸಹಾಯದಿಂದ ಹೊಸ ಕೊಠಡಿ ನಿರ್ಮಾಣಕ್ಕೆ ಭೂಮಿ ನೆರವೇರಿಸಿದರು.

ಮುಖ್ಯ ಶಿಕ್ಷಕಿ ಮಂಜುಳಾ ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬ ಗಾದೆಯಂತೆ ಈ ಸಮಾಜಮುಖಿ ಕೆಲಸದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ತುಂಬಾ ಸಂತಸದ ವಿಷಯ. ಶಿಕ್ಷಕರ ಕೆಲಸ ಪಾಠ ಮಾಡುವುದು ಅಷ್ಟೇ ಅಲ್ಲ, ಶಾಲೆಯ ಅಭಿವೃದ್ಧಿಯಲ್ಲೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ಸಾಕ್ಷಿ ದೇವಿರಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಗ್ರಾಮಸ್ಥರು ಹಾಗೂ ದಾನಿಗಳ ಮನವೊಲಿಸಿ ಹೊಸ ಕೊಠಡಿ ನಿರ್ಮಾಣಕ್ಕೆ ಮುಂದಾಗಿದ್ದಾರುವುದು ಮೆಚ್ಚುವಂತದ್ದು.

ಕಳೆದ ತಿಂಗಳಿನಲ್ಲಿ ಬಂದ ವಿಜಯವಾಣಿ ಪತ್ರಿಕೆಯ ವರದಿಗೆ ಸ್ಪಂದಿಸಿರುವ ಗ್ರಾಮಸ್ಥರು, ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ ಹೆಚ್ಚುವರಿ ಕೊಠಡಿಗಳನ್ನು ಹಾಗೂ ಅಡುಗೆ ಕೋಣೆ ನಿರ್ಮಿಸಲು ಮುಂದಾಗಿದ್ದಾರೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಮತಿ ಭುವನೇಶ್ವರಿ, ಹಳೇ ಬೇರು ಹೊಸ ಚಿಗುರು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಂದೀಶ್.ಡಿ.ಜಿ., ಗ್ರಾಮದ ಮುಖಂಡ ಗುರುಸಿದ್ದಪ್ಪ, ರಾಮಪ್ಪ, ಸಣ್ಣಯ್ಯ, ಮುಖ್ಯ ಶಿಕ್ಷಕಿ ಮಂಜುಳಾ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net