

ವಿಜಯವಾಣಿ ಸುದ್ದಿಜಾಲ ಚಿಂಚೋಳಿ
ತಾಲೂಕಿನಾದ್ಯಂತ ಶುಕ್ರವಾರ ಸುರಿದ ಧಾರಕಾರ ಮಳೆಗೆ ವಿವಿಧಡೆ ಅವಾಂತರ ಸೃಷ್ಟಿ, ನೂರಾರು ಮನೆಗಳಿಗೆ ನುಗ್ಗಿದ ನೀರು, ದೇವಾಲಯಗಳು ಜಲಾವೃತ, ಭೈರಂಪಳ್ಳಿ ಸೇತುವೆ ಒಡೆದು ಸಂಪರ್ಕ ಕಡಿತಗೊಂಡಿದೆ.
ಭೋಗಾವತಿ ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತ, ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಅಪಾರ ಹಾನಿ,
ಚಂದ್ರಂಪಳ್ಳಿ ಸಂಪರ್ಕ ಸೇತುವೆ, ಗಣಾಪೂರ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತ,
ಚಿಕ್ಕನಿಂಗದಳ್ಳಿ ಕೆರೆ ಬಂಡ ಬಿರಕು ದುರಸ್ಥಿ ಸಣ್ಣ ನೀರಾವರಿ ಇಲಾಖೆ ಸನ್ನದ್ಧವಾಗಿದೆ. ಕಲ್ಲೂರ ರೋಡ್ ಗ್ರಾಮದ ವೀರಭದ್ರೇಶ್ವರ ದೇವಾಲಯ ಸೇರಿದಂತೆ ನೂರಾರು ಮನೆಗಳಿಗೆ ನೀರು ಅಪಾರ ಹಾನಿ, ತಾಲೂಕು ಆಡಳಿತದಿಂದ ಗಂಜಿ ಕೇಂದ್ರ ಸ್ಥಾಪನೆ, ಮಧ್ಯರಾತ್ರಿ ಎನ್. ಡಿ. ಆರ್. ಎಫ್ ತಂಡ ಭೇಟಿ ಜನರ ರಕ್ಷಣೆ, ನೂರಾರು ಮೇಕೆಗಳು ಚುಕ್ಕಿ ನಾಲಕ್ಕೆ ಹರಿದು ಹೋಗಿವೆ. ಸೋಮಲಿಂಗದಳ್ಳಿ ಸೇತುವೆ ಜಲಾವೃತ, ಸಂಪರ್ಕ ಕಡಿತ, ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಕುಂಚಾವರಂ ಭಾಗದ ಚೌಕಿತಾಂಡ, ಶಾದಿಪೂರ ಬಳಿ ನಿರಂತರ ಮಳೆಯಿಂದ ಟ್ರಾನ್ಸಫಾರ್ಮರ್ ನೆಲಕ್ಕೆ ಉರುಳಿದ್ದು, ಡಾಂಬರ್ ರಸ್ತೆ ಕೊಚ್ಚಿಕೊಂಡು ಹೊಗಿದೆ. ರಾತ್ರಯಿಂದ ವಿದ್ಯುತ್ ಕಡಿತವಾಗಿದೆ. ರೈತರು ಬೆಳೆದ ಕಬ್ಬು ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಮಳೆಯು ನಿರಂತರ ಮುಂದೆ ವರೆದಿದೆ.