ಮಾ.8ಕ್ಕೆ ಭೀಮಸೇನ್ ಜೋಶಿ, ಗುರುರಾವ್ ದೇಶಪಾಂಡೆ ಸ್ಮರಣಾರ್ಹ ಅಹೋರಾತ್ರಿ ಸಂಗೀತೋತ್ಸವ

sangeetha
Published on

ಬೆಂಗಳೂರು : ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಸಂಗೀತ ಸಭಾ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಮಾ.8 ಶನಿವಾರ ಗುರುರಾವ್ ದೇಶಪಾಂಡೆ ಮತ್ತು ಭೀಮಸೇನ್ ಜೋಶಿ ಸ್ಮರಣಾರ್ಥ ರಾತ್ರಿ 9 ಗಂಟೆಯಿಂದ ಅಹೋರಾತ್ರಿ ಸಂಗೀತೋತ್ಸವ ಆಯೋಜಿಸಲಾಗಿದೆ.

ಸಂಗೀತೋತ್ಸವದಲ್ಲಿ ಪಂಡಿತ್ ವೆಂಕಟೇಶ್ ಕುಮಾರ್, ಪಂಡಿತ್ ವಿನಾಯಕ ತೊರವಿ ಗಾಯನ, ವಿದುಷಿ ಅನುಪಮಾ ಭಾಗವತ್ ಸಿತಾರ್, ಓಜಸ್ ಅಧಿಯ ತಬಲಾ ವಾದನ ಹಾಗೂ ಅನಿರುದ್ಧ ಐತಾಳ್ ಗಾಯನದ ಮೂಲಕ ಸಂಗೀತಾಸಕ್ತರ ಮನ ತಣಿಸಲಿದ್ದಾರೆ.

ಸಹವಾದನದಲ್ಲಿ ಪಂಡಿತ್ ರವೀಂದ್ರ ಯಾವಗಲ್, ಪಂಡಿತ್ ರವೀಂದ್ರ ಕಟೋಟಿ, ಪಂಡಿತ್ ವ್ಯಾಸಮೂರ್ತಿ ಕಟ್ಟಿ, ಪಂಡಿತ್ ರಾಜೇಂದ್ರ ನಾಕೋಡ್ ಹಾಗೂ ಸುಧಾಂಶು ಘರ್ಪುರೆ ಕಲಾವಿದರಿಗೆ ಸಾಥ್ ನೀಡಲಿದ್ದಾರೆ.

ನಾಡಿನ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಸಮಾರಂಭದಲ್ಲಿ ಗುರುಗಂಧರ್ವ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಇದೇ ವೇಳೆ ಇತ್ತೀಚೆಗೆ ದೇಶದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಡಾ. ಎಲ್. ಸುಬ್ರಮಣಿಯನ್ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net