ಶಂಕರ ತತ್ವಚಿಂತನೆಯಿಂದ ಬದುಕು ಸಾರ್ಥಕ; ಪ್ರೊ.ಜಿ. ಶಿವರಾಮ ಅಗ್ನಿಹೋತ್ರಿ ಚಿಂತನೆ

tatvadhara
Published on

ಬೆಂಗಳೂರು: ಬದುಕಿನಲ್ಲಿ ಶಂಕರ ಭಗವತ್ಪಾದರ ಅನುಭೂತಿಯನ್ನು ಪಡೆದುಕೊಂಡು, ಅವರ ತತ್ವ-ಚಿಂತನೆ ಮಾಡುವುದರಿಂದ ಬದುಕು ಸಾರ್ಥಕವಾಗುತ್ತದೆ ಎಂದು ವಿದ್ವಾಂಸರಾದ ಪ್ರೊ. ಜಿ. ಶಿವರಾಮ ಅಗ್ನಿಹೋತ್ರಿ ಹೇಳಿದ್ದಾರೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಶೋಧ ಕೇಂದ್ರವು ಗಿರಿನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಆಯೋಜಿಸಿದ ‘ತತ್ತ್ವಧಾರಾ’ ಪ್ರವಚನಮಾಲಿಕೆಯ ಐದನೇ ಪ್ರವಚನದಲ್ಲಿ ‘ಶ್ರೀಶಂಕರ ಭಗವತ್ಪಾದಕೃತ ಭಾಷ್ಯ ವೈಶಿಷ್ಟ್ಯ’ ವಿಷಯದ ಕುರಿತು ಮಾತನಾಡಿದರು.

ಪ್ರಸ್ಥಾನತ್ರಯ ಎಂದು ಪ್ರಸಿದ್ಧವಾದ ಉಪನಿಷತ್ತು, ಭಗವದ್ಗೀತೆ ಹಾಗೂ ಬ್ರಹ್ಮಸೂತ್ರಗಳ ಮೇಲೆ ಆದಿ ಶಂಕರಾಚಾರ್ಯರು ರಚಿಸಿದ ಭಾಷ್ಯಗಳ ಹೇಗೆ ವ್ಯಾಕರಣ ದೋಷರಹಿತವೂ, ಪರಮತ-ನಿಂದಾರಹಿತವೂ, ನಿಜತತ್ತ್ವಬೋಧಕವೂ ಆಗಿವೆ ಎಂಬುದನ್ನು ವಿವರಿಸಿದರು. ‘ತತ್ತ್ವಧಾರಾ’ ಪ್ರವಚನಮಾಲಿಕೆಯು ಪ್ರತಿ ತಿಂಗಳ ಮೊದಲ ಭಾನುವಾರ ಗಿರಿನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಹಾಗೂ ಮೂರನೇ ಭಾನುವಾರ ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ನಡೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net