ಎಐಕೆಎಸ್ ಜಿಲ್ಲಾಧ್ಯಕ್ಷರಾಗಿ ಭೀಮಾಶಂಕರ ಮಾಡಿಯಾಳ

0109 KLB 04
ಕಲಬುರಗಿ : ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್) ಕಲಬುರಗಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಭೀಮಾಶಂಕರ ಮಾಡಿಯಾಳ ಹಾಗೂ ಕಾರ್ಯದರ್ಶಿಯಾಗಿ ಮಹ್ಮದ್ ಚೌಧರಿ ಕೊಡಚಿ ಆಯ್ಕೆಯಾಗಿದ್ದಾರೆ
Published on

ಕಲಬುರಗಿ : ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್) ಕಲಬುರಗಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಭೀಮಾಶಂಕರ ಮಾಡಿಯಾಳ ಹಾಗೂ ಕಾರ್ಯದರ್ಶಿಯಾಗಿ ಮಹ್ಮದ್ ಚೌಧರಿ ಕೊಡಚಿ ಆಯ್ಕೆಯಾಗಿದ್ದಾರೆ.
ನಗರದಲ್ಲಿ ಶನಿವಾರ ಜರುಗಿದ ಎಐಕೆಎಸ್ ೮ನೇ ಜಿಲ್ಲಾ ಸಮ್ಮೇಳನದ ಸಮಾರೋಪದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ.ಲೋಕೇಶ, ಉಪಾಧ್ಯಕ್ಷ ಬಾಬುರಾವ ಹೊನ್ನಾ, ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಅವರ ನೇತೃತ್ವದಲ್ಲಿ ಚರ್ಚೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ನೂತನ ಅಧ್ಯಕ್ಷ ಮಾಡಿಯಾಳ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪಾಧ್ಯಕ್ಷರಾಗಿ ಶರಣಬಸಪ್ಪ ಗಣಜಲಖೇಡ, ಭೀಮಶಾ ಓಕಳಿ, ಕಲ್ಯಾಣಿ ಅವಟೆ,ಮಲ್ಲಿಕಾರ್ಜುನ ಜಾಪುರ, ಸಹಕಾರ್ಯದರ್ಶಿಗಳಾಗಿ ಭೀಮರಾಯ ಮುದಬಸಪ್ಪಗೋಳ, ಸಿದ್ದಣ್ಣ ಕಣ್ಣೂರ, ಸುನೀಲ್ ಪಾಟೀಲ್, ಲಕ್ಷಿö್ಮÃ ದೊಡ್ಡಮನಿ, ಲಕ್ಷಿö್ಮÃಬಾಯಿ ರುದ್ರವಾಡಿ, ಖಜಾಂಚಿಯಾಗಿ ಮಲ್ಲಿಕಾರ್ಜುನ ಕೆಲ್ಲೂರ, ಹಿರಿಯ ಸಲಹೆಗಾರರಾಗಿ ಪದ್ಮರಾಜ ಜಾನಿಬ್ ಹಾಗೂ ೧೩ ಜನರ ಜಿಲ್ಲಾ ಮಂಡಳಿ ರಚಿಸಲಾಗಿದೆ ಎಂದು ವಿವರಿಸಿದರು.ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ರೈತರ ಸಮಸ್ಯೆಗಳನ್ನು ಮುಂದಿಸಿಕೊAಡು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು. ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರಿಗೆ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net