ಭೀಮಾತೀರದ ಚಿನ್ನದ ವ್ಯಾಪಾರಿಗೆ ಧಮ್ಕಿ ಹಾಕಿದ ಪ್ರಕರಣ: ಆರೋಪಿ ಬಾಗಪ್ಪ ಹರಿಜನ ಬಂಧನ

Bhimatheera
Published on

ವಿಜಯಪುರ: ಭೀಮಾತೀರದ ಚಿನ್ನದ ವ್ಯಾಪಾರಿಗೆ 5 ಕೋಟಿಗಾಗಿ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಎಂಬಾತನನ್ನು ಬಂಧಿಸಲಾಗಿದೆ.

ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ಬಂಧಿಸಲಾಗಿದ್ದು, ಪೊಲೀಸರು ಖಾಸಗಿ ವಾಹನದಲ್ಲಿ ವಿಜಯಪುರಕ್ಕೆ ಕರೆತರುತ್ತಿದ್ದಾರೆ. ಬಳಿಕ ಕೋವಿಡ್ 19 ಟೆಸ್ಟ್ ಮಾಡಿಸಿ, ನ್ಯಾಯಾಧೀಶರ ಎದುರು ಹಾಜರು ಪಡಿಸಲಿದ್ದಾರೆ.

ಅಂದಹಾಗೆ ಬಾಗಪ್ಪ ಹರಿಜನ ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ 5 ಕೋಟಿ ನೀಡುವಂತೆ ಧಮ್ಕಿ ಹಾಕಿದ ಪ್ರಕರಣದ 2ನೇ ಆರೋಪಿಯಾಗಿದ್ದು, ದೂರು ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಜುಲೈ 22ರಂದು ಮೂವರು ಆರೋಪಿಗಳ ವಿರುದ್ಧ ಡಾಂಗೆ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎ1 ಆರೋಪಿ ಲಕ್ಷ್ಮಿಕಾಂತ ಇಲ್ಲಿಯವರೆಗೂ ನಾಪತ್ತೆಯಾಗಿದ್ದು, ಮೂರನೇ ಆರೋಪಿ ಮಹಾದೇವ ಸಾಹುಕಾರನಿಗೆ ಜಾಮೀನು ಮಂಜೂರಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net