ಭರತನಾಟ್ಯ ಕಲಾವಿದೆ ಅನನ್ಯ ಭ್ರಾಮರಿ ರಂಗ ಪ್ರವೇಶ

Dance
Published on

ಬೆಂಗಳೂರು: ಭರತನಾಟ್ಯ ಗುರು ವಿದುಷಿ ಕೌಸಲ್ಯ ನಿವಾಸ್ ಶಿಷ್ಯೆ ಅನನ್ಯ ಭ್ರಾಮರಿ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಕುಂದಲಹಳ್ಳಿಯ ಧ್ವನಿ ಸಭಾಂಗಣದಲ್ಲಿ ಕಳೆದ ಭಾನುವಾರ ಜರುಗಿತು.

ಶಾಸ್ತ್ರೀಯ ನಾಟ್ಯ ಕಲೆಯಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಮಾತ್ರವಲ್ಲದೆ ಪಂಚಮುಖಿ ಶಿಕ್ಷಣ, ತದನಂತರ ಜೀವ ಸಂಸ್ಕಾರವೂ ದೊರೆಯುತ್ತದೆ ಎಂದು ಮಣಿಪಾಲ ಆಸ್ಪತ್ರೆಯ ಡಾ.ಎಸ್.ವಿದ್ಯಾಧರ ತಿಳಿಸಿದರು.

ನಾಟ್ಟುವಾಂಗ ಹಾಗೂ ಸಮಗ್ರ ಕಾರ್ಯಕ್ರಮದ ನಿರ್ದೇಶನವನ್ನು ಗುರು ಕೌಸಲ್ಯ ನಿರ್ವಹಿಸಿದರು. ಗಾಯನದಲ್ಲಿ ಎಂ.ಎಸ್. ದೀಪಕ್, ಮೇರುಮೃದಂಗದಲ್ಲಿ ರಾಮಮೂರ್ತಿ ಶ್ರೀಗಣೇಶ್, ವೇಣು ನಿನಾದದಲ್ಲಿ ಬಿ.ಎನ್. ಸ್ಕಂದ ಕುಮಾರ್, ವೀಣೆಯಲ್ಲಿ ವಿ.ವಿ.ಶ್ರೀಕಾಂತ್, ರಿಧಮ್ ಪ್ಯಾಡ್​ನಲ್ಲಿ ಡಿ.ವಿ. ಪ್ರಸನ್ನ ಕುಮಾರ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಒಡಿಸಿ ಕಲಾವಿದೆ ಮಧುಲಿತಾ ಮಹಾಪಾತ್ರ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net