ಭರತನಾಟ್ಯ ರಂಗಪ್ರವೇಶ ಜೂ. 29ರಂದು

New Project (19)
Published on

ಬೆಂಗಳೂರು: ಖ್ಯಾತ ಭರತನಾಟ್ಯ ಕಲಾವಿದೆ ಕ್ಷಮಾ ಶಾ ಅವರ ಶಿಷ್ಯೆ ಸಂಜನಾ ಸಿರಿ ಮತ್ತೂರು ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜೂ. 29ರಂದು (ಶನಿವಾರ) ನಡೆಯಲಿದೆ.

ಮೂಲತ: ಕರ್ನಾಟಕದವರಾದ ಸದ್ಯ ಅಮೆರಿಕಾದಲ್ಲಿ ನೆಲೆಸಿರುವ ವೀಣಾ ಮತ್ತು ಚೈತನ್ಯ ಮತ್ತೂರು ದಂಪತಿಗಳ ಪುತ್ರಿಯಾಗಿರುವ ಸಂಜನಾ ಸಿರಿ ಅಮೆರಿಕಾದಲ್ಲಿದ್ದರೂ ಕನ್ನಡ ಸಂಸ್ಕೃತಿ ಬಿಂಬಿಸುವ ಭರತನಾಟ್ಯ ಕಲೆಯನ್ನು ಕಲಿತು ಅಭಿಮಾನ ಮೆರೆದಿದ್ದಾರೆ.

ಜೂ.29 ರಂದು ಸಂಜೆ 4.30ಕ್ಕೆ ಜಯನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಶ್ರೀ ಶಿವರಾತ್ರೀಶ್ವರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net