

ಬಂಟ್ವಾಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ. ಜಿಲ್ಲಾಮಟ್ಟದ ತೃತೀಯ ಚರಣ ಕಬ್ಸ್ ಮತ್ತು ಸುವರ್ಣಗರಿ ಬುಲ್-ಬುಲ್ ವಿಭಾಗದ ಪರೀಕ್ಷಾ ಶಿಬಿರ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಬಿ.ಎಂ.ತುಂಬೆ ಉದ್ಘಾಟಿಸಿದರು. ಕಬ್ಸ್ ವಿಭಾಗದ ನಾಯಕ ಎಂ.ರಾಮ್ ರಾವ್(ಲೀಡರ್ ಟ್ರೇನರ್ ಕಬ್ ಮಾಸ್ಟರ್), ಬುಲ್ ಬುಲ್ ವಿಭಾಗದ ನಾಯಕಿ ಸೇವಂತಿ(ಪ್ರಿ ಎಲ್‌ಟಿ ಪ್ಲಾಕ್ ಲೀಡರ್), ಮುಖ್ಯಶಿಕ್ಷಕ ಹರಿಪ್ರಸಾದ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ವಿವಿಧ ಪರೀಕ್ಷೆ, ಚಟುವಟಿಕೆಗಳಲ್ಲಿ ಭಾಗವಹಿಸಿದರು. ಪ್ಲಾಕ್ ಲೀಡರ್ ಚಿತ್ರಾ ಕೆ. ಸ್ವಾಗತಿಸಿದರು ಮತ್ತು ಗೈಡ್ಸ್ ಕ್ಯಾಪ್ಟನ್ ಪದ್ಮಾವತಿ ವಂದಿಸಿದರು. ಕಬ್ ಮಾಸ್ಟರ್ ಗೌತಮಿ ಕೆ. ನಿರೂಪಿಸಿದರು.