ಹಕ್ಕುಪತ್ರ ವಿತರಣೆಯಾಗದೆ ಸಮಸ್ಯೆ - ಶಾಸಕ ಅಶೋಕ್ ರೈ ಹೇಳಿಕೆ - ಅಕ್ರಮ-ಸಕ್ರಮ ಬೈಠಕ್

PTR_1 APR_3
Published on

ವಿಟ್ಲ: ಕೃಷಿ ಮಾಡಿದ ಜಾಗವನ್ನು ಫಲಾನುಭವಿಗಳಿಗೆ ನೀಡಬೇಕು. ಜಮೀನು ಮಂಜೂರಾತಿಗಾಗಿ ೧೨ ವರ್ಷದ ಹಿಂದೆ ಅರ್ಜಿ ನೀಡಿದವರಿಗೆ ಇನ್ನೂ ಹಕ್ಕುಪತ್ರ ವಿತರಣೆಯಾಗಿಲ್ಲ. ಕಾನೂನುಗಳು ವ್ಯತಿರಿಕ್ತವಾಗುತ್ತಿದ್ದು, ಕೃಷಿ ಮಾಡಿದ ಹಲವು ಮಂದಿ ವಿಟ್ಲ ಭಾಗದಲ್ಲಿ ತುಂಬಾ ತೊಂದರೆಗೊಳಗಾಗಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬೊಬ್ಬೆಕೇರಿ ಸಭಾಭವನದಲ್ಲಿ ವಿಟ್ಲ ಹೋಬಳಿ ಅಕ್ರಮ ಸಕ್ರಮ (ಬಗರ್ ಹುಕುಂ) ಬೈಠಕ್ ಮತ್ತು ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾನೂನು ಬದಲಾವಣೆ ಆಗುವುದಾದರೆ ರಾಜ್ಯದಲ್ಲಿ ಆಗಬೇಕಾಗಿದ್ದು, ಪ್ರಯತ್ನ ಮಾಡಲಾಗುತ್ತಿದೆ. ಅಕ್ರಮ ಸಕ್ರಮದ ಅತ್ಯಂತ ಅಽಕ ಕಡತಗಳು ಪುತ್ತೂರಿನಲ್ಲಿ ವಿಲೇವಾರಿ ಮಾಡಿದ್ದು, ಆಪ್‌ನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಅಽಕಾರಿ ವರ್ಗ ಪುತ್ತೂರು ಭಾಗದವರಲ್ಲಿ ಕೇಳುವಂತಾಗಿದೆ. ಹಲವು ಗ್ರಾಮದ ಕಡತಗಳು ಬೈಠಕ್‌ಗೆ ಬರುತ್ತಿಲ್ಲ. ಬಡವರ ಅರ್ಜಿಗಳು ಬಾಕಿ ಉಳಿಯಬಾರದು ಎಂದರು.

ಬೈಠಕ್‌ನಲ್ಲಿ ೫೨ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ವಿವಿಧ ಗ್ರಾಮಗಳ ಅಕ್ರಮ ಸಕ್ರಮ ೫೯ ಕಡತಗಳನ್ನು ವಿಲೇವಾರಿ ಮಾಡಲಾಯಿತು. ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್,ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು.

ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ವಿ.ಕೆ.ಎಂ.ಅಶ್ರಫ್, ಅಬ್ದುಲ್ ರಹಿಮಾನ್, ಉಪತಹಸೀಲ್ದಾರ ರಾಜೇಶ್, ಕಂದಾಯ ನಿರೀಕ್ಷಕ ರವಿ ಎಂ.ಎನ್., ಸಹಾಯಕ ಗಿರೀಶ್, ವಿವಿಧ ಗ್ರಾಮಗಳ ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಹಾಜರಿದ್ದರು. ಉಪತಹಸೀಲ್ದಾರ್ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net