

ಹಗರಿಬೊಮ್ಮನಹಳ್ಳಿ: ಮಹಾದೇವ ಶ್ರೀಗಳು ಸುದ್ದಿಯಾಗದೆ, ಸಮಾಜವನ್ನು ಶುದ್ಧಿ ಮಾಡಿ ಮಹಾತ್ಮರಾಗಿದ್ದಾರೆ ಎಂದು ಹಂಪಸಾಗರದ ಮಹಾದೇವ ತಾತ ಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಚಿಂತ್ರಪಳ್ಳಿಯಲ್ಲಿ ಮಂಗಳವಾರ ಮಹಾದೇವ ತಾತ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮಹಾದೇವ ತಾತನವರ ಮಠಗಳು ಒಂಬತ್ತು ಇವೆ.
ಅದರಲ್ಲಿ ಬಳ್ಳಾರಿ ಜಿಲ್ಲೆಯಲ್ಲೇ ಅತಿ ಹೆಚ್ಚಿವೆ. ಆಂಧ್ರದಲ್ಲಿ ಎರಡು, ವಿಜಯನಗರ ಜಿಲ್ಲೆಯಲ್ಲೇ 5 ಮಠಗಳಿದ್ದು, ಭಕ್ತರು ಕಟ್ಟಿಸಿದ ಚಿಂತ್ರಪಳ್ಳಿಯ ಮಠ 6ನೇ ಮಠವಾಗಿದೆ. ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎನ್ನುವುದಕ್ಕೆ ಮಹಾದೇವ ತಾತನ ಆಶೀರ್ವಾದವೇ ಸಾಕ್ಷಿ ಎಂದರು. ಪ್ರಮುಖರಾದ ವಿರೂಪಾಕ್ಷ ಗೌಡ್ರು, ಹುರುಕಡ್ಲಿ ಶಿವಕುಮಾರ್ ಗೌಡ್ರು,
ನೆಲ್ಕುದ್ರಿ ಶಿವರಾಜಪ್ಪ, ಎನ್.ಬಿ.ವಾಗೇಶ್, ಚಿಂತ್ರಪಳ್ಳಿ ದೇವೇಂದ್ರ, ಬಣಕಾರ ಗೊಣೆಪ್ಪ, ಗುರುಬಸವರಾಜ್, ಬೆಳ್ಳಕ್ಕಿ ರಾಮಣ್ಣ, ಕೆ.ಬಿ.ರೇಣುಕಪ್ಪ, ಬೆಳ್ಳಕ್ಕಿ ಮಾರುತಿ, ಗುಜನೂರು ಈಶಪ್ಪ, ತಳವಾರ ಕೊಟ್ರೇಶ್, ಬಾವಿಹಳ್ಳಿ ಕೊಟ್ರೇಶಪ್ಪ, ಗಾಂಜಿ ಮಾರುತೆಪ್ಪ, ಬಡಿಗೇರ್ ನಾಗಪ್ಪ, ಮಹಾದೇವ ಪಾಟೀಲ್ ಇತರರಿದ್ದರು.