

ಬಂಟ್ವಾಳ: ನಾರಾಯಣಗುರುಗಳು ಸಾಮಾಜಿಕ ನ್ಯಾಯದ ಸಿದ್ಧಾಂತ, ಸಮಾನತೆಯ ತತ್ವ ಮತ್ತು ವಿಧ್ಯಾಭ್ಯಾಸ, ಧಾರ್ಮಿಕ ಪ್ರವೇಶ, ಆತ್ಮಗೌರವಕ್ಕಾಗಿ ಮಾಡಿದ ಹೋರಾಟ ಮಹಿಳಾ ಸ್ವಾತಂತ್ರ್ಯದ ಬುನಾದಿಗೆ ಕೊಡುಗೆ. ಅವರ ಚಿಂತನೆಗಳು ಮತ್ತು ಕಾರ್ಯಗಳು ಮಹಿಳಾ ಸ್ವಾತಂತ್ರ್ಯಕ್ಕೆ ಶಕ್ತಿ ಮತ್ತು ಸ್ಫೂರ್ತಿ ನೀಡಿದೆ. ಅವರು ರೂಢಿಸಿದ ಮಾನವೀಯ ಮೌಲ್ಯ ಮತ್ತು ಸಮಾನತೆಯ ಧ್ಯೇಯಗಳು ಮಹಿಳಾ ಸ್ವಾತಂತ್ರ್ಯದ ಬುನಾದಿ ಎಂದು ವಕೀಲೆ ಶೈಲಜಾ ರಾಜೇಶ್ ತಿಳಿಸಿದರು.
ಯುವವಾಹಿನಿ ಬಂಟ್ವಾಳ ಟಕದ ಆಶ್ರಯದಲ್ಲಿ ಸದಸ್ಯೆ ಸುನಿತಾ ನಿತಿನ್ ಮಾರ್ನಬೈಲ್ ಮನೆಯಲ್ಲಿ ಭಜನಾ ಸಂಕೀರ್ತನೆ, ಗುರುತತ್ವವಾಹಿನಿ ಮಾಲಿಕೆ 44ರಲ್ಲಿ ಗುರುಸಂದೇಶ ನೀಡಿದರು.
ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಯುವವಾಹಿನಿ ಬಂಟ್ವಾಳ ಘಟಕ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ, ಅರುಣ್ ಮಹಾಕಾಳಿಬೆಟ್ಟು, ನಾಗೇಶ್ ಪೊನ್ನೊಡಿ, ಪ್ರೇಮನಾಥ್ ಕರ್ಕೇರ, ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ವ್ನಿೇಶ್ ಬೊಳ್ಳಾಯಿ, ಯಶೋಧರ ಕಡಂಬಳಿಕೆ, ಜಗನ್ನಾಥ್ ಕಲ್ಲಡ್ಕ, ಶೈಲೇಶ್ ಕುಚ್ಚಿಗುಡ್ಡೆ, ಭವಾನಿ ಅಮೀನ್, ನಾಗೇಶ್ ಏಲಬೆ ಮತ್ತಿತರರಿದ್ದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು.