

ಮೂಲ್ಕಿ: ಕೊಲಕಾಡಿಯ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಅರ್ಚಕ ಶ್ರೀಕಾಂತ್ ಭಟ್ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಭಜನಾ ಜ್ಯೋತಿಯನ್ನು ಮಾಲಿನಿ ಮತ್ತು ಲಕ್ಷ್ಮಣ ವಿ.ಪೂಜಾರಿ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿಯ ಗೋಪಿನಾಥ ಪಡಂಗ, ಗಂಗಾಧರ ಶೆಟ್ಟಿ, ಮನೋಹರ ಕೋಟ್ಯಾನ್, ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ಸೇವಾ ಯುವಕ ಸಂಘ ಗೌರವಾಧ್ಯಕ್ಷ ರಂಗನಾಥ ಶೆಟ್ಟಿ, ಅಣ್ಣು ಕೋಟ್ಯಾನ್, ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಪುಷ್ಪರಾಜ್, ಉಪಾಧ್ಯಕ್ಷ ರಂಜನ್ ಬಿ.ಶೆಟ್ಟಿ, ಸಂದೀಪ್ ಕೊಲಕಾಡಿ, ಭಜನಾ ಸಂಚಾಲಕರಾದ ಗಿರೀಶ್ ಅಂಚನ್, ಶೇಖರ್ ಕೊಲಕಾಡಿ, ಸುದೇಶ್ ಶೆಟ್ಟಿ, ನಾರಾಯಣ ಪೂಜಾರಿ, ಅಶ್ವಥ್, ಚಿದಾನಂದ ಶ್ರೀನಿವಾಸ ಕೊಲಕಾಡಿ, ದೇವಸ್ಥಾನದ ಪ್ರಬಂಧಕ ರಮಾನಂದ ಕೋಟ್ಯಾನ್ ಉಪಸ್ಥಿತರಿದ್ದರು.